ಇಂದು ಕರ್ತವ್ಯಕ್ಕೆ ಹಾಜರಾದ ಪ್ರಧಾನಿ ಮೋದಿ: ಪಿಎಂ ಕಿಸಾನ್ ನಿಧಿಯ ಅನುದಾನ ಬಿಡುಗಡೆಗೆ ಮೊದಲ ಸಹಿ

Prasthutha|

ನವದೆಹಲಿ: ಪ್ರಧಾನ ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ನಿಧಿಯ 17ನೇ ಕಂತು ಬಿಡುಗಡೆಗೆ ಸಹಿ ಹಾಕುವ ಮೂಲಕ ತಮ್ಮ 3ನೇ ಅವಧಿಯನ್ನು ಆರಂಭಿಸಿದ್ದಾರೆ.

- Advertisement -

ಸುಮಾರು ₹20,000 ಕೋಟಿಯ ‘ಪಿಎಂ ಕಿಸಾನ್ ನಿಧಿ’ ಯೋಜನೆಯು ಸುಮಾರು 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ.

ಹಣ ಬಿಡುಗಡೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಅವರು, ‘ನಮ್ಮದು ರೈತರ ಕಲ್ಯಾಣಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರವಾಗಿದೆ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ಇದಕ್ಕೆ ಸಂಬಂಧಿಸಿದೆ. ಮುಂದಿನ ದಿನಗಳಲ್ಲಿ ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ನಾವು ಇನ್ನಷ್ಟು ಕೆಲಸ ಮಾಡಬೇಕೆಂದು ಬಯಸುತ್ತೇವೆ’ ಎಂದು ಹೇಳಿದ್ದಾರೆ.

Join Whatsapp