ಪ್ರಕಾಶ್ ಪುರುಷರಕಟ್ಟೆ ನಿಧನ: ಎಸ್ ಡಿಪಿಐ ಸಂತಾಪ

Prasthutha|

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಮಳಿಗೆ ಹೊಂದಿದ್ದ, ಪುರುಷರಕಟ್ಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆಯವರ ಅಗಲುವಿಕೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

- Advertisement -


ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಎಸ್ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಪ್ರಕಾಶ್ ರವರು ಜಾತ್ಯಾತೀತ ನಿಲುವಿನ ವ್ಯಕ್ತಿಯಾಗಿ ಎಲ್ಲರಲ್ಲೂ ಸಮಾನ ರೀತಿಯಲ್ಲಿ ಒಳ್ಳೆಯ ಗುಣ ಸ್ವಭಾವದಿಂದ ವರ್ತಿಸುತ್ತಿದ್ದರು. ಅವರು ದಾನಿಯೂ ,ಸಮಾಜ ಸೇವಕರು ಹಾಗೂ ಕ್ರೀಡಾಪಟು ಕೂಡ ಆಗಿದ್ದರು. ಇವರ ಒಳ್ಳೆಯ ಗುಣದಿಂದಲೇ ಹಲವಾರು ಗೆಳೆಯರನ್ನು ಹೊಂದಿದ್ದರು.ಇವರ ಅಗಲುವಿಕೆಯು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.


ಸೃಷ್ಟಿಕರ್ತನು ಇವರ ಕುಟುಂಬಕ್ಕೆ ಬಂದು ಬಳಗಕ್ಕೆ ಹಾಗೂ ಗೆಳೆಯರಿಗೆ ಇವರ ಅಕಾಲಿಕ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

Join Whatsapp