ತಲವಾರು ಹಿಡಿದುಕೊಂಡು ಭಯ ಸೃಷ್ಟಿಸುತ್ತಿದ್ದ ಸಂಘಪರಿವಾರದ ನಾಲ್ವರ ವಿರುದ್ಧ ಪ್ರಕರಣ ದಾಖಲು

Prasthutha|

ಬೋಳಿಯಾರ್: ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲು

- Advertisement -

ಬಂಟ್ವಾಳ: ಬಡಗಬೆಳ್ಳೂರಿನ ಸಾರ್ವಜನಿಕ ಸ್ಥಳದಲ್ಲಿ ತಂಡವೊಂದು ತಲವಾರು ಹಿಡಿದುಕೊಂಡು ಜನತೆಗೆ ಭಯವನ್ನುಂಟು ಮಾಡುತ್ತಿದೆ ಎಂಬ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಪರಾರಿಯಾದ ಘಟನೆ ಜೂ. 9ರಂದು ಸಂಜೆ ನಡೆತ್ತು.

ಭೋಜರಾಜ, ವಿನೋದ್‌, ವಿವೇಕ್‌, ರಕ್ಷಿತ್‌, ರಕ್ಷಕ್‌ ಅವರು ತಲವಾರು ಹಿಡಿದುಕೊಂಡು ಜನತೆಗೆ ಭಯವನ್ನುಟ್ಟು ಮಾಡುತ್ತಿದ್ದರು.

- Advertisement -

ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಹರೀಶ್‌ ಎಂ.ಆರ್‌. ಅವರ ತಂಡ ದಾಳಿ ನಡೆಸಿದ್ದು, ಆರೋಪಿಗಳು ಪೊಲೀಸ್‌ ಜೀಪನ್ನು ಕಂಡು ಪರಾರಿಯಾಗಿದ್ದರು. ಪೊಲೀಸರು ಅಲ್ಲಿ ನಿಂತಿದ್ದ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ತಲವಾರು ಪತ್ತೆಯಾಗಿತ್ತು. ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ಶಸ್ತಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೋಳಿಯಾರ್: ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದ ಹಿನ್ನೆಲೆಯಲ್ಲಿ ರವಿವಾರ ಮುಡಿಪು ಸಮೀಪದ ಬೋಳಿಯಾರ್ ಎಂಬಲ್ಲಿ ರಾತ್ರಿ ವಿಜಯೋತ್ಸವ ನಡೆಸಲಾಗಿತ್ತು. ರಾತ್ರಿ ಸುಮಾರು 8:45ಕ್ಕೆ ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಬೋಳಿಯಾರ್ ಮುಹಿಯುದ್ದೀನ್ ಜುಮಾ ಮಸೀದಿ ದಾಟಿ ಮೆರವಣಿಗೆ ಸಾಗಿದ ಬಳಿಕ ಕೆಲವು ಮಂದಿ ಮಸೀದಿಯ ಮುಂದೆ ಕೋಮು ಪ್ರಚೋದಿತ ಘೋಷಣೆಗಳನ್ನು ಕೂಗಿದ್ದಾರೆಂದು ಮಸೀದಿಯ ಅಧ್ಯಕ್ಷ ಪಿ.ಕೆ.ಅಬ್ದುಲ್ಲಾ ದೂರು ನೀಡಿದ್ದರು. ಅದರ ಆಧಾರದಲ್ಲಿ ಬಿಜೆಪಿ ಕಾರ್ಯಕರ್ತರಾದ ಸುರೇಶ್, ವಿನಯ, ಸುಭಾಷ್, ರಂಜಿತ್, ಧನಂಜಯ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ನಡೆದ ಹಲ್ಲೆ ಮತ್ತು ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರೋಪಿಗಳಾದ ಮುಹಮ್ಮದ್ ಶಾಕೀರ್ (28), ಅಬ್ದುಲ್ ರಝಾಕ್(40), ಅಬೂಬಕ್ಕರ್ ಸಿದ್ದೀಕ್(35), ಸವಾದ್(18) ಹಾಗೂ ಮೋನು ಯಾನೆ ಹಫೀಝ್(24) ಎಂಬವರನ್ನು ಬಂಧಿಸಲಾಗಿದೆ.

Join Whatsapp