SDPI ಕೋಟೆಕಾರ್ ಪಟ್ಟಣ ಪಂಚಾಯತ್ ಬ್ಲಾಕ್ ಸಮಾಗಮ -2023

Prasthutha|

ಉಳ್ಳಾಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಹಮ್ಮಿಕೊಂಡಿರುವ ಬ್ಲಾಕ್ ಸಮಾಗಮ- 2023 ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶಂಸುದ್ದಿನ್ ಅಜ್ಜಿನಡ್ಕ ನೇತೃತ್ವದಲ್ಲಿ ಅಜ್ಜಿನಡ್ಕ ಪಕ್ಷದ ಕಚೇರಿಯಲ್ಲಿ ನಡೆಯಿತು.

- Advertisement -

ಮುಖ್ಯ ಅಥಿತಿಗಳಾಗಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ರಂತಡ್ಕ , ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ, ಕ್ಷೇತ್ರ ಕಾರ್ಯದರ್ಶಿ ಬಶೀರ್ SM ಉಪಸ್ಥಿತರಿದ್ದರು

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ, ಪಕ್ಷದ ಕಾರ್ಯಕರ್ತರು ಕ್ಷೇತ್ರದಾದ್ಯಂತ ನಡೆಸುತ್ತಿರುವ ಕೆಲಸಗಳು ಮತ್ತು ಮುಂದಿನ ದಿನಗಳಲ್ಲಿ ಪಕ್ಷವು ನಡೆಸಬೇಕಾದ ರಾಜಕೀಯ ಸಬಲೀಕರಣದ ವಿಷಯವಾಗಿ ಮಾತನಾಡಿದರು

- Advertisement -

 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪಕ್ಷದ ಕಾರ್ಯಚಟುವಟಿಕೆಗಳನ್ನು ಹಾಗೂ ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸಿ, ಎಲ್ಲಾ ಸ್ಥರದ ಪದಾಧಿಕಾರಿಗಳು ಹಾಗೂ ನಾಯಕರು ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ ಮತ್ತಷ್ಟು ಬಲಿಷ್ಠಗೊಳಿಸುವಂತೆ ಕರೆ ನೀಡಿದರು.

 ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ರಂತಡ್ಕ ಸಮಾರೋಪ ಭಾಷಣಗೈದರು. ಸಭೆಯಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೋಟೆಕಾರ್ ಪಟ್ಟಣ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ಶಂಸುದ್ದಿನ್ ಅಜ್ಜಿನಡ್ಕ ಸ್ವಾಗತಿಸಿ ಧನ್ಯವಾದಗೈದರು.