ಜೋಕಟ್ಟೆ | SDPI ಸಂಸ್ಥಾಪನಾ ದಿನಾಚರಣೆ

Prasthutha|

ಜೋಕಟ್ಟೆ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ೧೨ ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಎಸ್ ಡಿ ಪಿ ಐ  ಜೋಕಟ್ಟೆ ಗ್ರಾಮ ಸಮಿತಿ ವತಿಯಿಂತ ಕೆ ಬಿ ಎಸ್  ಬಳಿ ಧ್ವಜಾರೋಹಣ  ಕಾರ್ಯಕ್ರಮ ನಡೆಯಿತು.

- Advertisement -

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಡಿ ಪಿಐ  ರಾಜ್ಯ  ಕಾರ್ಯದರ್ಶಿ ಆಶ್ರಫ್ ಮಾಚಾರ್ ಧ್ವಜಾರೋಹಣಗೈದರು,  ನಂತರ ಮಾತನಾಡಿದ ಅವರು ಎಸ್ ಡಿ ಪಿ ಐ ಯು ಶೋಷಿತ, ದಮನಿತರ ದ್ವನಿಯಾಗಿ ಹುಟ್ಟಿಕೊಂಡಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಕೇವಲ ಚುನಾವಣಾ ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಅದು  ತನ್ನ ೧೨  ವರ್ಷದ ಇತಿಹಾಸದಲ್ಲಿ  ಜನರ ಹಕ್ಕು ಗಳಿಗೆ ಬೇಕಾಗಿ ನಿರಂತರ ಹೋರಾಟ ಮಾಡಿಕೊಂಡ ಪಕ್ಷವಾಗಿದೆ ಎಂದು ಹೇಳಿದರು.

ನ್ಯಾಯವು ಇಂದು ಮರಿಚೀಕೆಯಾಗಿದೆ. ಭ್ರಷ್ಟಾಚಾರವು ತುಂಬಿ ತುಳುಕಾಡುತ್ತಿದೆ,  ಸರಕಾರವು ಬಂಡಾವಾಳ ಶಾಹಿಗಳ ಪರವಾಗಿ ಕಾನೂನು ರೂಪಿಸಿಕೊಳ್ಳುತಿದೆ, ಯಾರದರೂ ಸರಕಾರದ  ಜನ ವಿರೋಧಿ ನೀತಿಯ ವಿರುದ್ದವಾಗಿ ಮಾತನಾಡಿದರೆ ಅವರ ದ್ವನಿಯನ್ನು ಅಡಗಿಸುವ, ಬಂಧಿಸುವ ಕೆಲಸ ಮಾಡುತ್ತಿದೆ ಅಲ್ಲದೇ ಕೋಮುವಾದದ ಮೂಲಕ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದೆ, ಇದು ದೇಶವನ್ನು ಅವನತಿಯತ್ತ ಸಾಗಿಸಬಹುದು ಎಂದರು.

- Advertisement -

 ಸಿ ಎ ಎ , ಎನ್ ಆರ್ ಸಿ  ಮೂಲಕ  ಒಂದು ಸಮುದಾಯವನ್ನು ಹೊರಗೆ ಹಾಕುವ ಷಡ್ಯಂತರವು ಒಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ದೇಶದಲ್ಲಿ ಒಂದು ಸುಂದರವಾದ ಸಂವಿಧಾನವಿದೆ, ಎಲ್ಲಾ ಜಾತಿ ಧರ್ಮದವರಿಗೂ ಸಮಾನವಾದ ನ್ಯಾಯ, ಅವಕಾಶವಿದೆ ಅದನ್ನು ಜಾರಿಗೆ ತರುವ ಪ್ರಯತ್ನವನ್ನು ಕೂಡ ಸರಕಾರ ಮಾಡುತ್ತಿಲ್ಲ. ಹಸಿವು, ಭಯ ಮುಕ್ತ ಭಾರತವನ್ನು ಕಟ್ಟಲು ನಾವೆಲ್ಲರೂ ಒಂದಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಜೋಕಟ್ಟೆ ವಲಯ ಗ್ರಾಮ ಸಮಿತಿ ಅಧ್ಯಕ್ಷ ಹಾಗು ಗ್ರಾಮ ಪಂಚಾಯತ್ ಸದಸ್ಯ ಶಿಹಾಬ್ ಜೋಕಟ್ಟೆ ವಹಿಸಿದ್ದರು, ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಗ್ರಾಮ ಪಂಚಾಯತ್ ಸದಸ್ಯ ಪರ್ವೆಝ್ ಅಲಿ, ಪಿ ಎಪ್ ಐ ಜೋಕಟ್ಟೆ ಏರಿಯಾಧ್ಯಕ್ಷ  ಇಂತಿಯಾಝ್, ರಫೀಕ್ ಜೋಕಟ್ಟೆ, ಆಶ್ರಫ್ ಸಲ್ವಾ ಮುಂತಾದವರು ಉಪಸ್ಥಿತರಿದ್ದರು. ಶಾಹಿಲ್ ಜೋಕಟ್ಟೆ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.

Join Whatsapp