ಜ್ಞಾನವಾಪಿ ಮಸೀದಿ ಸಮೀಕ್ಷೆ ತಡೆ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ತಕ್ಷಣವೇ ತಡೆಹಿಡಿಯಬೇಕೆಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆದಾಗ್ಯೂ, ಸುಪ್ರೀಂ ಕೋರ್ಟ್ ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

- Advertisement -

ಅಂಜುಮನ್ ಸಮನ್ ಸಖಾರಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ‘ಈ ವಿಷಯದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲ. ಇಂಥಹ ಪರಿಸ್ಥಿತಿಯಲ್ಲಿ, ನಾವು ತಕ್ಷಣವೇ ಆದೇಶವನ್ನು ಹೇಗೆ ಹೊರಡಿಸಬಹುದು? ನಾವು ಈ ಪ್ರಕರಣವನ್ನು ಪಟ್ಟಿ ಮಾಡಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ನಾವು ಓದಿಲ್ಲ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ ಸಮೀಕ್ಷೆ ಮುಂದುವರಿಯಲಿದೆ ಮತ್ತು ಮೇ 17 ರೊಳಗೆ ವರದಿಯನ್ನು ಸಲ್ಲಿಸಬೇಕಾಗಿದೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಹೇಳಿದೆ. ವಾರಣಾಸಿಯ ನ್ಯಾಯಾಲಯವು ಇಬ್ಬರು ವಕೀಲರನ್ನು ಸಮೀಕ್ಷಾ ಆಯೋಗಕ್ಕೆ ಸೇರಿಸಿದೆ.

- Advertisement -

ವಾರಣಾಸಿ ಆಸ್ತಿಗೆ ಸಂಬಂಧಿಸಿದಂತೆ ಸರ್ವೆಗೆ ಆದೇಶಿಸಲಾಗಿದೆ. ಈ ಮಸೀದಿ ಪ್ರಾರ್ಥನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯಡಿ ರಕ್ಷಿಸಲ್ಪಟ್ಟಿದೆ. ಆದರೆ ಈಗ ಸಮೀಕ್ಷೆ ನಡೆಸಲು ನ್ಯಾಯಾಲಯವೊಂದು ಆಯುಕ್ತರನ್ನು ನೇಮಿಸಿದೆ ಎಂದು ಅರ್ಜಿದಾರರ ಪರ ವಕೀಲ ಅಹ್ಮದಿ ಗಮನ ಸೆಳೆದರು.

ನೋಡೋಣ ಎಂದು ಸಿಜೆಐ ಹೇಳಿದರು.

ಯಥಾಸ್ಥಿತಿ ಕಾಪಾಡಲಾರದೂ ಆದೇಶ ಹೊರಡಿಸಿ ಎಂದು ಅಹ್ಮದಿ ಮನವಿ ಮಾಡಿದರು.

ಆಗ ಎನ್.ವಿ.ರಮಣ, ಸಮಸ್ಯೆ ಏನು ಎಂಬುದು ನನಗೆ ಗೊತ್ತಿಲ್ಲ. ಅರ್ಜಿಯನ್ನು ಇನ್ನೂ ನೋಡಿಲ್ಲ, ಬಳಿಕ ತೀರ್ಮಾನಿಸುತ್ತೇವೆ ಎಂದರು ಹೇಳಿದರು.

ಏಪ್ರಿಲ್ 8ರಂದು ವಾರಣಾಸಿ ನ್ಯಾಯಾಲಯದ ಎಡ್ವಕೇಟ್ ಕಮಿಶನರ್ ಒಬ್ಬರನ್ನು ನೇಮಿಸಿ, ವಿವಾದದ ಪ್ರದೇಶವಾದ ಮಾ ಶ್ರಿಂಗಾರ್ ಗೌರಿ ಸ್ತಲ್ ನ ಸರ್ವೇಕ್ಷಣೆ ನಡೆಸಲು ಮತ್ತು ಪ್ರತಿ ಕ್ಷಣದ ವೀಡಿಯೋ ತೆಗೆದು ಸಂಪೂರ್ಣ ವರದಿ ಸಲ್ಲಿಸುವಂತೆ ಆಜ್ಞಾಪಿಸಿತ್ತು.

ಸ್ಥಳೀಯ ಕೋರ್ಟಿನ ಆಜ್ಞೆ ರದ್ದು ಪಡಿಸುವಂತೆ ಮಸೀದಿ ಸಮಿತಿಯವರು ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯ ವಜಾ ಮಾಡಿತ್ತು. ಏಪ್ರಿಲ್ 26ರಂದು ವಾರಣಾಸಿ ಕೋರ್ಟು ಸಂಪೂರ್ಣವಾಗಿ ವಿವಾದಿತ ಸ್ಥಳದ ವೀಡಿಯೋ ಚಿತ್ರಣ ಮಾಡುವಂತೆ ಮತ್ತೆ ಆದೇಶ ನೀಡಿತು. ತಪಾಸಣೆ ಆರಂಭವಾಯಿತು. ಇದು ಪಕ್ಷಪಾತದ ಧೋರಣೆ ಎಂದು ಮಸೀದಿ ಸಮಿತಿಯು ಕೋರ್ಟಿಗೆ ಮತ್ತೆ ಅರ್ಜಿ ಸಲ್ಲಿಸಿತು.

ಬೀಗ ತೆಗೆದು ಇಲ್ಲವೇ ಬೀಗ ಒಡೆದು ಕೂಡಲೆ ಸರ್ವೇಕ್ಷಣೆ ನಡೆಸಿ, ಎಲ್ಲ ವೀಡಿಯೋ ತೆಗೆದು ಮೇ 17ರೊಳಗೆ ವರದಿ ಸಲ್ಲಿಸಬೇಕು ಎಂದು ಮೇ 12ರಂದು ವಾರಣಾಸಿ ನ್ಯಾಯಾಲಯ ಕಟ್ಟಾಜ್ಞೆ ಮಾಡಿತು.

ಮಸೀದಿ ಸಮಿತಿಯು ಕೋರ್ಟಿಗೆ ಅರ್ಜಿ ಸಲ್ಲಿಸಿ ನೇಮಕಗೊಂಡಿರುವ ತಪಾಸಕ ಕಮಿಶನರ್ ಮಿಶ್ರಾ ಪಕ್ಷಪಾತಿ ಎಂದು ಆರೋಪ ಮಾಡಿದರು. ಕೋರ್ಟು ಆಗ ಇನ್ನಿಬ್ಬರು ವಕೀಲರಾದ ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್ ಸಿಂಗ್ ರನ್ನು ಸಹ ತಪಾಸಕರಾಗಿ ಸಹಾಯಕ್ಕೆ ನೇಮಿಸಿತು.

ಕೋರ್ಟು ಆಜ್ಞೆಯಂತೆ ಎಲ್ಲವನ್ನೂ ತಪಾಸಿಸಲು ಎಲ್ಲ ರೀತಿಯಿಂದಲೂ ಸಹಕರಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದ ಸೀನಿಯರ್ ವಿಭಾಗೀಯ ಸಿವಿಲ್ ಜಡ್ಜ್ ರವಿಕುಮಾರ್ ದಿವಾಕರ್ ಅವರು, ಸದರಿ ಕಾರ್ಯಾಚರಣೆಗೆ ಸಂಪೂರ್ಣ ರಕ್ಷಣೆ ನೀಡಬೇಕಾದುದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಜವಾಬ್ದಾರಿ ಎಂದು ಸ್ಪಷ್ಟಪಡಿಸಿತು.

ಯಾರಾದರರೂ ಯಾವುದೇ ರೀತಿಯ ತಕರಾರು ತೆಗೆದರೆ ಅವರ ವಿರುದ್ಧ ಎಫ್ ಐಆರ್ ದಾಖಲಿಸಿರಿ ಎಂದೂ ಹೇಳಿದ ವಾರಣಾಸಿ ಕೋರ್ಟು, ಯಾವುದೇ ರೀತಿಯಲ್ಲಿ ಸರ್ವೇಕ್ಷಣೆ ನಡೆದು ಮುಗಿಯಬೇಕು. ಅದನ್ನು ಯಾರೂ ನಿಲ್ಲಿಸುವಂತಿಲ್ಲ ಎಂದು ಸಹ ಕೋರ್ಟು ಹೇಳಿತು. 

Join Whatsapp