ರಾಹುಲ್ ಭಟ್ ಹತ್ಯೆ: ಮೋದಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ ಕಾಶ್ಮೀರಿ ಪಂಡಿತರು

Prasthutha|

ಶ್ರೀನಗರ: ಕಾಶ್ಮೀರದಲ್ಲಿ ರಾಹುಲ್ ಭಟ್ ಹತ್ಯೆಯ ಹಿನ್ನೆಲೆಯಲ್ಲಿ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಕಾಶ್ಮೀರಿ ಪಂಡಿತರು ತಮ್ಮ ಸುರಕ್ಷತೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದರು.

- Advertisement -

 ಕಾಶ್ಮೀರ ಪಂಡಿತರು ರಸ್ತೆಗಳನ್ನು ತಡೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ, ಹಲವೆಡೆ ಕ್ಯಾಂಡಲ್ ಲೈಟ್ ಮೆರವಣಿಗೆಯೂ ನಡೆಯಿತು.

ಭಯೋತ್ಪಾದಕರು ಗುರುವಾರ ಬುದ್ಗಾಮ್ ಜಿಲ್ಲೆಯ ಚದೂರ ಗ್ರಾಮದ ತಹಸೀಲ್ದಾರ್ ಕಚೇರಿಗೆ ನುಗ್ಗಿ ಕಾಶ್ಮೀರ ಪಂಡಿತ ರಾಹುಲ್ ಭಟ್ ಎಂಬುವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಅವರು ಮೃತ ಪಟ್ಟಿದ್ದರು.



Join Whatsapp