ಸುರತ್ಕಲ್ ಫ್ಲೈಓವರ್ ನಡಿ ಸಾವರ್ಕರ್ ಫೋಟೊ: ತೆರವುಗೊಳಿಸಲು ಗಡುವು ನೀಡಿದ SDPI

Prasthutha|

ಮಂಗಳೂರು: ಸುರತ್ಕಲ್ ನ ಫ್ಲೈ ಓವರ್ ನ ಫಿಲ್ಲರ್ ಒಂದಕ್ಕೆ ಬ್ರಿಟಿಷರೊಂದಿಗೆ ಕ್ಷಮೆಯಾಚಿಸಿದ್ದ ಸಾವರ್ಕರ್ ಫೋಟೋವನ್ನು ಯಾವುದೋ ಸಂಘಟನೆಯವರು ಅಳವಡಿಸಿದ್ದಾರೆ. ಇದಕ್ಕೆ SDPI ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ಕೂಡಲೇ ಇದನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು SDPI ಎಚ್ಚರಿಸಿದೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಈಗಾಗಲೇ ಪಕ್ಷದ ಜಿಲ್ಲಾಧ್ಯಕ್ಷರು, ಪಕ್ಷದ ಕಾರ್ಪೊರೇಟರ್ ಅವರು ಪೊಲೀಸ್ ಅಧಿಕಾರಿಗಳಿಗೆ, ಮಹಾನಗರ ಪಾಲಿಕೆ ಆಯುಕ್ತರಿಗೆ ಫೋನ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸಾವರ್ಕರ್ ಫೋಟೋ ತೆರವುಗೊಳಿಸಬೇಕು. ಅವರೊಬ್ಬರು ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದಂತಹವರು. ಅವರ ಫೋಟೋ ಹಾಕುವುದರಿಂದ ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಹೇಳಿದ್ದೇವೆ. ಆದರೆ ಇನ್ನು ಕೂಡ ಅದನ್ನು ತೆರವುಗೊಳಿಸಿಲ್ಲ.
ಇದಕ್ಕೆ ನಾವು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತೇವೆ. ಇನ್ನೊಂದು ಒಂದು ಗಂಟೆಯೊಳಗೆ ಅದನ್ನು ತೆರವುಗೊಳಿಸದೆ ಇದ್ದರೆ ಅಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ಕೂಡ ಕೊಟ್ಟಿದ್ದೇವೆ ಎಂದು ಸಾದಾತ್ ಬಜತ್ತೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp