ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಸ್ಪರ್ಶ: ದಂಪತಿ ಸ್ಥಳದಲ್ಲೇ ಸಾವು

Prasthutha|

ದಾವಣಗೆರೆ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ತಗುಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ತಾಲ್ಲೂಕಿನ ಬಾವಿಹಾಳು ಗ್ರಾಮದಲ್ಲಿ ನಡೆದಿದೆ.

- Advertisement -

ಬಿ.ಆರ್.ರವಿಶಂಕರ್ (35 ) ಮತ್ತು ನಾಗವೇಣಿ (32 ) ಮೃತ ದಂಪತಿ ಎಂದು ತಿಳಿದು ಬಂದಿದೆ.
ಮನೆ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಕಟ್ಟಿದ ತಂತಿಯಲ್ಲಿ ನಾಗವೇಣಿ ಬಟ್ಟೆ ಒಣಗಲು ಹಾಕಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿದ್ದು ಕೂಡಲೇ ಕೂಗಿದ್ದಾರೆ. ಆಗ ಮನೆಯಲ್ಲಿದ್ದ ಪತಿ ರವಿಶಂಕರ್ ಓಡಿ ಬಂದು ಪತ್ನಿಯನ್ನು ಎಳೆಯಲು ಮುಂದಾಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಪ್ರವಹಿಸಿದೆ. ಇದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಯಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp