ಮುಸ್ಲಿಂ ಬಾಲಕ ಮೂತ್ರ ವಿಸರ್ಜಿಸಲು ದೇವಸ್ಥಾನಕ್ಕೆ ಪ್ರವೇಶಿಸಿದ್ದಾನೆ ಎಂದ ಮತಾಂಧರು | ನಕಲಿ ಪ್ರಚಾರವನ್ನು ಭೇದಿಸಿದ ‘ಆಲ್ಟ್ ನ್ಯೂಸ್’

Prasthutha|

ಹೊಸದಿಲ್ಲಿ: ದೇವಸ್ಥಾನವೊಂದರಲ್ಲಿ ನೀರು ಕುಡಿಯಲು ಹೋದ ಮುಸ್ಲಿಂ ಬಾಲಕನನ್ನು ಅಮಾನುಷವಾಗಿ ಥಳಿಸಿದ್ದನ್ನು ನಕಲಿ ವೀಡಿಯೋ ಬಿಡುಗಡೆ ಮಾಡುವ ಮೂಲಕ ಸಮರ್ಥಿಸಲು ಹಿಂದುತ್ವ ನಾಯಕರು ಪ್ರಯತ್ನಿಸುತ್ತಿದ್ದಾರೆ. ದೇವಾಲಯ ಮತ್ತು ವಿಗ್ರಹದ ಮೇಲೆ ಬಾಲಕನೊಬ್ಬ ಮೂತ್ರ ವಿಸರ್ಜಿಸುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಮತಾಂಧರು ವ್ಯಾಪಕವಾಗಿ ಪ್ರಸಾರ ಮಾಡುತ್ತಿದ್ದಾರೆ.

- Advertisement -

‘ಮುಸ್ಲಿಂ ಬಾಲಕ ದೇವಸ್ಥಾನಕ್ಕೆ ಪ್ರವೇಶಿಸಿದ್ದು ನೀರು ಕುಡಿಯಲು ಅಲ್ಲ ಮೂತ್ರ ವಿಸರ್ಜನೆ ಮಾಡಲು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪ್ರಸಾರವಾಗುತ್ತಿದೆ. ಹಿಂದುತ್ವ ನಾಯಕರು ಮತ್ತು ಸಾವಿರಾರು ಸಂಘ ಪರಿವಾರದ ಕಾರ್ಯಕರ್ತರು ಈ ವೀಡಿಯೋ ಟ್ವೀಟ್ ಮಾಡಿದ್ದರು.

ಆದರೆ, ಈ ವೀಡಿಯೋ ನಕಲಿಯಾಗಿದೆ. ಇದು ಮೂರು ವರ್ಷಗಳ ಹಿಂದೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಘಟನೆಯಾಗಿದೆ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ವರದಿ ಮಾಡಿದೆ. ದೇವಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ರಮೇಶ್ ಮತ್ತು ಆನಂದ್ ಅವರನ್ನು ಬಂಧಿಸಲಾಗಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

Join Whatsapp