ಆಡಳಿತ ಪಕ್ಷವನ್ನು ಟೀಕಿಸಿದರೆ ದೇಶದ್ರೋಹಿ ಪಟ್ಟ: ರೋಹಿಂಗ್ಟನ್ ನಾರಿಮನ್ ಕಿಡಿ

Prasthutha: January 19, 2022

ಮುಂಬೈ: ಆಡಳಿತ ಪಕ್ಷವನ್ನು ಟೀಕಿಸುವವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸುವ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ಬಲವಾಗಿ ಪ್ರತಿಕ್ರಿಯಿಸಿದ್ದಾರೆ. ದೇಶದ್ರೋಹದ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಲು ಇದು ಸಕಾಲ ಎಂದು ನಾರಿಮನ್ ಹೇಳಿದರು. ಕೇವಲ ಹಿಂಸಾಚಾರದಲ್ಲಿ ಕೊನೆಗೊಳಿಸದೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗುರುತಿಸುವ ಸಮಯ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು. ಮುಂಬೈನ ಡಿಎಂ ಹಾರಿಶ್ ಸ್ಕೂಲ್ ಆಫ್ ಲಾ ದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಾರಿಮನ್ ಅವರ ಭಾಷಣದ ವೀಡಿಯೊ ತುಣುಕು ಬಾರ್ & ಬೆಂಚ್ ಸುದ್ದಿ ಪೋರ್ಟಲ್ ನಲ್ಲಿ ಪ್ರಕಟಿಸಲಾಗಿತ್ತು.
ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ನಿಂತು ಕಾರ್ಯಾಚರಿಸುವವರ ಮೇಲೆ ಕಟ್ಟುನಿಟ್ಟಾದ ದೇಶದ್ರೋಹದ ಆರೋಪಹೊರಿಸಲಾಗುತ್ತದೆ. ಆದರೆ ದ್ವೇಷದ ಭಾಷಣಮಾಡುವವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆಡಳಿತ ಪಕ್ಷದ ಎಲ್ಲಾ ಉನ್ನತ ಹುದ್ದೆಯಲ್ಲಿರುವವರು ದ್ವೇಷದ ಭಾಷಣದ ಬಗ್ಗೆ ಮೌನವಾಗಿರುವುದು ಮಾತ್ರವಲ್ಲದೆ, ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಎಂದು ಕಿಡಿಕಾರಿದರು.
ತಿರುವನಂತಪುರದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಭಾಷಣದಲ್ಲಿ ಹೇಳಿದ ‘ದ್ವೇಷ ಭಾಷಣ ಅಸಂವಿಧಾನಿಕ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ನಾರಿಮನ್ ಮಾತನಾಡಿದರು.
ಯುಎಪಿಎ ಕಾಯ್ದೆಯಡಿ ದೇಶದ್ರೋಹದ ಸೆಕ್ಷನ್ 124 ಎ ಅನ್ನು ರದ್ದುಗೊಳಿಸಬೇಕೆಂದು ಅವರು ಈ ಹಿಂದೆ ಮನವಿ ಮಾಡಿದ್ದರು. ತಮ್ಮ ನಿವೃತ್ತಿಯ ನಂತರ ಹೇಳಿಕೆ ನೀಡಿದ್ದ ನಾರಿಮನ್, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!