ಭದ್ರತಾ ಸಿಬ್ಬಂದಿ ವೀಡಿಯೋ ಮಾಡುತ್ತಿದ್ದರೂ ಮೆಡಿಕಲ್ ಶಾಪನ್ನು ದರೋಡೆ ಮಾಡಿ ಪರಾರಿಯಾದ ಖತರ್ನಾಕ್ ಕಳ್ಳ!

Prasthutha: June 18, 2021

ಸ್ಯಾನ್ ಫ್ರಾನ್ಸಿಸ್ಕೋ : ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮೆಡಿಕಲ್ ಶಾಪೊಂದರಲ್ಲಿ ಕಳ್ಳನೊಬ್ಬ ದರೋಡೆ ಮಾಡುವ ವಿಡಿಯೋ ಭಾರೀ ವೈರಲ್ ಆಗಿದೆ. ಬೈಸಿಕಲ್ ನಲ್ಲಿ ಬಂದ ಕಳ್ಳನೊಬ್ಬ ಸ್ಯಾನ್ ಫ್ರಾನ್ಸಿಸ್ಕೋದ ಗ್ಯಾಫ್ ಆ್ಯಂಡ್ ಫೆಲ್ ಸ್ಟ್ರೀಟ್‌ನಲ್ಲಿರುವ ವಾಲ್‌ಗ್ರೀನ್ಸ್ ಮೆಡಿಕಲ್ ಶಾಪ್ ನಲ್ಲಿ ದರೋಡೆ ಮಾಡಿದ್ದಾನೆ. ಕಪ್ಪು ಬಟ್ಟೆ ಧರಿಸಿ ಬೈಸಿಕಲ್ ಸವಾರಿ ಮಾಡುತ್ತಿದ್ದ ಕಳ್ಳನೊಬ್ಬ ಅಂಗಡಿಯೊಳಗೆ ಪ್ರವೇಶಿಸಿ ದರೋಡೆ ಮಾಡುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

KGO-TV ವರದಿಗಾರ್ತಿ ಲಿಯಾನೆ ಮೆಲೆಂಡೆಸ್ ಟ್ವಿಟ್ಟರ್ ನಲ್ಲಿ ಈ 21 ಸೆಕೆಂಡುಗಳ ವಿಡಿಯೋ ಹಂಚಿಕೊಂಡಿದ್ದಾರೆ.  ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ದರೋಡೆ ಮಾಡುತ್ತಿರುವ ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ಕಾಣಬಹುದು. ಆದರೆ ಕಳ್ಳನು ಅದನ್ನು ನೋಡದಂತೆ ನಟಿಸಿ ಕಳ್ಳತನ ಮುಂದುವರಿಸುತ್ತಾನೆ. ಸೆಕ್ಯುರಿಟಿ ಗಾರ್ಡ್ ಕಳ್ಳನ ಕೈಯಿಂದ ಚೀಲವನ್ನು ಹಿಡಿದೆಳೆಯುವುದನ್ನೂ ವೀಡಿಯೋದಲ್ಲಿ ಕಾಣಬಹುದು. ಅಂತಿಮವಾಗಿ, ಕಳ್ಳನು ದರೋಡೆ ಮಾಡಿದ ಸಾಮಾನುಗಳೊಂದಿಗೆ ಅಂಗಡಿಯಿಂದ ಹೊರಬರುತ್ತಾನೆ.

ವೀಡಿಯೋ ವೀಕ್ಷಿಸಿ….

ಈ ವೀಡಿಯೊಗೆ ಇದುವರೆಗೆ 6 ಮಿಲಿಯನ್ ವೀವ್ಸ್, 17,000 ಲೈಕ್‌ಗಳು ಮತ್ತು ಸಾವಿರಾರು ಕಮೆಂಟ್‌ಗಳು ಬಂದಿವೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ