ಇಡೀ ಗ್ರಾಮದ ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಿ ಸಾಧನೆಗೈದ ಮಧ್ಯಪ್ರದೇಶದ ಮೆಹ್ಗಾವನ್ ಗ್ರಾಮ ಪಂಚಾಯತ್

Prasthutha: June 18, 2021

►ಶತಾಯುಷಿಗಳಿಗೂ ಕೋವಿಡ್ ಲಸಿಕೆ !

ಭೋಪಾಲ್‌ : ಮಧ್ಯಪ್ರದೇಶದ ಮೇಹ್ಗಾವನ್‌ ಪರಿಯತ್‌ ಗ್ರಾಮದಲ್ಲಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಗ್ರಾಮದ ಎಲ್ಲಾ ಅರ್ಹ ಗ್ರಾಮಸ್ಥರಿಗೆ ನೀಡುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇಬ್ಬರು ಶತಾಯುಷಿಗಳು ಸೇರಿದಂತೆ ಎಲ್ಲಾ ಅರ್ಹ ಗ್ರಾಮಸ್ಥರು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿರುವುದಾಗಿ ಗ್ರಾಮಾಡಳಿತ ಘೋಷಿಸಿದೆ. ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿರುವ ಗ್ರಾಮ ಇದಾಗಿದೆ.

ಗ್ರಾಮದಲ್ಲಿ 1009 ನೋಂದಾಯಿತ ಮತದಾರರಿದ್ದಾರೆ. ಅವರಲ್ಲಿ 956 ಮಂದಿ ಕೋವಿಡ್‌ 19 ಲಸಿಕೆಯ ಮೊದಲ ಡೋಸ್‌ ಬುಧವಾರದೊಳಗೆ ಪಡೆದಿದ್ದಾರೆ. ಇನ್ನುಳಿದ 46 ಮಂದಿ ಇತ್ತೀಚೆಗೆ ಕೋವಿಡ್‌ ನಿಂದ ಗುಣಮುಖರಾಗಿದ್ದವರು, ಗರ್ಭಿಣಿ ಹೆಂಗಸರು ಮತ್ತು ಗ್ರಾಮದಿಂದ ಹೊರಗಿದ್ದಾರೆ.

ಎಲ್ಲಾ ಗ್ರಾಮಸ್ಥರು ಮೊದಲ ಡೋಸ್‌ ಪೂರ್ಣಗೊಳಿಸಿದ್ದರೆ, ಬಹುತೇಕರು ಎರಡನೇ ಡೋಸ್‌ ಕೂಡ ಪಡೆದಿದ್ದಾರೆ. ವಿಶೇಷವೇನೆಂದರೆ, 106 ವರ್ಷದ ತಿಜ್ಜೊ ಬಾಯಿ ಮತ್ತು 100 ವರ್ಷದ ತ್ರಿವೇಣಿ ಬಾಯಿ ಸ್ವತಃ ಆಸಕ್ತಿ ತೋರಿಸಿ, ಲಸಿಕೆ ಪಡೆದು, ಲಸಿಕೆ ಕುರಿತ ಊಹಾಪೋಹಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ.

ಗ್ರಾಮದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯ ಶಾಸಕ ಸುಶೀಲ್‌ ತಿವಾರಿ ಇಂದು ಗ್ರಾಮದ ಅಭಿವೃದ್ಧಿಗಾಗಿ ತನ್ನ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಅನುದಾನ ನೀಡಿದ್ದಾರೆ. ಅಲ್ಲದೆ, ಲಸಿಕೆ ಪಡೆದ ಇಬ್ಬರು ಶತಾಯುಷಿಗಳಿಗೆ ತಲಾ 5000 ರೂ. ನೀಡಿ ಪ್ರೋತ್ಸಾಹಿಸಿದ್ದಾರೆ.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ