ಭ್ರಷ್ಟಾಚಾರದ ಸೂಚ್ಯಂಕ ಬಿಡುಗಡೆ; ಭಾರತದ ಸ್ಥಿತಿ ಕಳವಳಕಾರಿ !

Prasthutha|

ಡೆನ್ಮಾರ್ಕ್, ಫಿನ್ಲೆಂಡ್ , ನ್ಯೂಜಿಲೆಂಡ್ ಅತ್ಯಂತ ಪಾರದರ್ಶಕ ರಾಷ್ಟ್ರಗಳು

- Advertisement -

ನವದೆಹಲಿ: 180 ರಾಷ್ಟ್ರಗಳ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವನ್ನು ಟ್ರಾನ್ಸ್’ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆಯು ಬಿಡುಗಡೆ ಮಾಡಿದ್ದು, 2021ರ ಸೂಚ್ಯಂಕದಲ್ಲಿ ಭಾರತ 85ನೇ ಸ್ಥಾನದಲ್ಲಿದೆ. 2020ರ ಸೂಚ್ಯಂಕದಲ್ಲಿ 86ನೇ ಸ್ಥಾನದಲ್ಲಿದ್ದ ಭಾರತ ಒಂದು ಸ್ಥಾನದ ‘ಭಡ್ತಿ’ಪಡೆದಿದೆ.

ಭ್ರಷ್ಟಾಚಾರದ ವಿರುದ್ಧ 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿರುವ ಟ್ರಾನ್ಸ್’ಪರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆಯು, ಕಳೆದ ಒಂದು ದಶಕಗಳಿಂದಲೂ ಭಾರತದ ಪರಿಸ್ಥಿತಿ ‘ಕಳವಳಕಾರಿ’ಯಾಗಿ ಮುಂದುವರಿದಿದೆ ಎಂದು ಅಭಿಪ್ರಾಯಪಟ್ಟಿದೆ.

- Advertisement -

ಸಮೀಕ್ಷೆಗೆ ಒಳಪಡಿಸಿದ 180 ದೇಶಗಳಲ್ಲಿ ನೆರೆಯ ಪಾಕಿಸ್ತಾನ ಕಳೆದ ವರ್ಷಕ್ಕಿಂತ 17 ಸ್ಥಾನ ಕುಸಿದು 140ನೇ ಸ್ಥಾನಕ್ಕೆ ಜಾರಿದೆ.
ಭೂತಾನ್ ಹೊರತುಪಡಿಸಿ ಉಳಿದೆಲ್ಲಾ ಭಾರತದ ನೆರೆಯ ರಾಷ್ಟಗಳು ಭಾರತಕ್ಕಿಂತ ಹೆಚ್ವಿನ ಭ್ರಷ್ಟಾಚಾರವನ್ನು ಹೊಂದಿರುವುದಾಗಿ ಸಂಸ್ಥೆಯು ಹೇಳಿದೆ.

0–100 – ಭ್ರಷ್ಟಾಚಾರ ಗ್ರಹಿಕೆಯನ್ನು ಅಳೆಯಲು ನಿಗದಿ ಮಾಡಿದ್ದ ಅಂಕಗಳ ಪ್ರಕಾರ ಡೆನ್ಮಾರ್ಕ್, ಫಿನ್ಲೆಂಡ್ ಹಾಗೂ ನ್ಯೂಜಿಲೆಂಡ್ ರಾಷ್ಟ್ರಗಳು ಮೊದಲ ಸ್ಥಾನವನ್ನು ಅಲಂಕರಿಸಿದ್ದು, ಅತ್ಯಂತ ಪಾರದರ್ಶಕ ರಾಷ್ಟ್ರ ಎಂಬ ಪಟ್ಟವನ್ನು ತಮ್ಮದಾಗಿಕೊಂಡಿವೆ. ಜರ್ಮನಿ 10ನೇ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ 24ನೇ ಸ್ಥಾನ ಪಡೆದಿದೆ.

Join Whatsapp