ಏರ್ ಇಂಡಿಯಾ ಎಡವಟ್ಟು : ಮಧ್ಯರಾತ್ರಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿರುವ ದುಬೈ ಪ್ರಯಾಣಿಕರು !

Prasthutha|

ಮಂಗಳೂರು : ಇಂದು ಬೆಳಗ್ಗೆ 6 ಗಂಟೆಗೆ ಮಂಗಳೂರಿನಿಂದ ದುಬೈಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನ ಸಂಸ್ಥೆಯ ಎಡವಟ್ಟು ಮತ್ತು ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ನಿನ್ನೆ ಮಧ್ಯರಾತ್ರಿ ಒಂದು ಗಂಟೆಯಿಂದ ಸಂಜೆಯ ವರೆಗೂ ನಿಲ್ದಾಣದಲ್ಲೇ  ಬಾಕಿಯಾಗಿರುವ ಘಟನೆ ನಡೆದಿದೆ.

- Advertisement -

ಬೆಳಗ್ಗಿನ ಪ್ರಯಾಣಕ್ಕಾಗಿ ಕೋವಿಡ್ ರಾಪಿಡ್ ಟೆಸ್ಟ್ ನಡೆಸಬೇಕಿರುವುದರಿಂದ ಐದು ಗಂಟೆ ಮೊದಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಿದ್ದರು. ಅದರಂತೆ ಕೆಲ ಪ್ರಯಾಣಿಕರು ಮಧ್ಯರಾತ್ರಿಯಿಂದಲೇ ನಿಲ್ದಾಣದಲ್ಲಿ ತಮ್ಮ ಕೋವಿಡ್ ಟೆಸ್ಟ್ ಗಾಗಿ ಕಾದು ಕುಳಿತಿದ್ದರು.  ರಾತ್ರಿ ಎರಡು ಗಂಟೆಯಾದರೂ ಕೌಂಟರ್ ತೆರೆಯದೇ ಇದ್ದುದರಿಂದ ಕೆಲ ಪ್ರಯಾಣಿಕರು ಈ ಕುರಿತು ಪ್ರಶ್ನಿಸಿದ್ದಾರೆ. ಆ ವೇಲೆ ನಮ್ಮ ಪೈಲಟ್ ಓರ್ವರಿಗೆ ಸ್ವಲ್ಪ ಆರೋಗ್ಯ ಸಮಸ್ಯೆಯಿದೆ. ಹಾಗಾಗಿ ವಿಮಾನ ಸ್ವಲ್ಪ ವಿಳಂಬವಾಗಿ ಪ್ರಯಾಣಿಸಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ದೂರದ ಪ್ರಯಾಣಿಕರಿಗೆ ವಸತಿ ಸೌಲಭ್ಯವನ್ನು ಒದಗಿಸಿದರು.

ಇಂದು ಬೆಳಗ್ಗೆ 8.30 ಗಂಟೆಗೆ ಮತ್ತೊಮ್ಮೆ ಸಂಸ್ಥೆಯ ಸಿಬ್ಬಂದಿಗಳು ಆಗಮಿಸಿ, ವಿಮಾನ ಇಂದು ಸಂಜೆ 4 ಗಂಟೆಗೆ ಹೊರಡಲಿದ್ದು, ಹಾಗಾಗಿ 11.30ಕ್ಕೆ ಪ್ರಯಾಣಿಕರು ರಾಪಿಡ್ ಟೆಸ್ಟ್ ಗಾಗಿ ಬರಬೇಕೆಂದು ತಿಳಿಸಿದ್ದರು. ಆದರೆ ಆ ಬಳಿಕವೂ ವಿಮಾನ ಹೊರಡುವ ಕುರಿತು ಯಾವುದೇ ಸಿದ್ಧತೆಗಳು ಆರಂಭವಾಗಲಿಲ್ಲ. ಮಹಿಳೆಯರು, ಮಕ್ಕಳು ಕೂಡಾ ಆಹಾರ ನೀರು ಸೇವಿಸದೆ ಕಾದು ಕೂತಿದ್ದರು.   ಕೆಲ ಪ್ರಯಾಣಿಕರು ಮತ್ತೆ ಈ ಕುರಿತು ಪ್ರಶ್ನಿಸಿದಾಗ, ಒಮ್ಮೆ ಸಂಜೆ 6 ಗಂಟೆಗೆ, ನಂತರ 7 ಅಥವಾ 8 ಗಂಟೆಗೆ ವಿಮಾನ ದುಬೈಗೆ ಹೊರಡಲಿದೆ ಎಂದು ತಿಳಿಸಿದರು ಎಂದು ಪ್ರಯಾಣಿಕರೊಬ್ಬರು ‘ಪ್ರಸ್ತುತ’ ದ ಜೊತೆ ಆರೋಪಿಸಿದ್ದಾರೆ.

- Advertisement -

ಇದೀಗ ಕೊನೆಯದಾಗಿ ಸಂಜೆ 6 ಗಂಟೆಗೆ ವಿಮಾನ ಪ್ರಯಾಣ ಆರಂಭಿಸಲಿದೆ ಎಂಬ ಮಾಹಿತಿ ಲಭಿಸಿರುವುದಾಗಿಯೂ ಅದೇ ವಿಮಾನದಲ್ಲಿ ದುಬೈಗೆ ತೆರಳಲಿರುವ ಪ್ರಯಣಿಕರೋರ್ವರು  ‘ಪ್ರಸ್ತುತ’ ಕ್ಕೆ ತಿಳಿಸಿದ್ದಾರೆ.     

Join Whatsapp