ರಘುರಾಮ್ ರಾಜನ್ RBI ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗಂಭೀರ ಆರೋಪ

Prasthutha|

ಬೆಂಗಳೂರು: ರಘುರಾಮ್ ರಾಜನ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಆರೋಪ ಮಾಡಿದ್ದಾರೆ.

- Advertisement -

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಘುರಾಮ್ ರಾಜನ್ ತಾನು ರಾಜಕಾರಣಿಯಾ ಅಲ್ಲವಾ ಎಂಬುದನ್ನು ನಿರ್ಧರಿಸಬೇಕು. ತಾನು ವಿಫಲ ರಾಜಕಾರಣಿಯೋ, ಅಥವಾ ವಿಫಲ ಆರ್ಥಿಕ ತಜ್ಞರೋ ನಿರ್ಧರಿಸಬೇಕು. ಅವರು ಆರ್​ಬಿಐ ಗವರ್ನರ್ ಆಗಿದ್ದಾಗ ದೇಶದ ಇಡೀ ಬ್ಯಾಂಕಿಂಗ್ ಸಿಸ್ಟಂ ಮತ್ತು ಹಣಕಾಸು ವಲಯವನ್ನು ಹಾಳುಗೆಡವಿದ್ದರು’ ಎಂದು ಹೇಳಿದ್ದಾರೆ.

ರಘುರಾಮ್ ರಾಜನ್ 2013ರಿಂದ 2016ರವರೆಗೂ ಆರ್​ಬಿಐ ಗವರ್ನರ್ ಅಗಿದ್ದರು. ಅವರ ಅವಧಿಯ ಕೊನೆಯ ದಿನಗಳಲ್ಲಿ ನೋಟ್ ಬ್ಯಾನ್ ಮಾಡಲಾಗಿತ್ತು. ಗವರ್ನರ್ ಸ್ಥಾನದಿಂದ ಹೊರಹೋದ ಬಳಿಕ ಅವರು ನೋಟ್ ಬ್ಯಾನ್ ಕ್ರಮವನ್ನು ಟೀಕಿಸಿದ್ದರು. ತಮಗೆ ಗೊತ್ತಿಲ್ಲದೇ ನೋಟು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಆರೋಪ ಮಾಡಿದ್ದರು.