ಪ್ರೇಕ್ಷಕರೆಡೆಗೆ ನುಗ್ಗಿದ ರೇಸ್ ಕಾರು: ಕನಿಷ್ಠ ಏಳು ಮಂದಿ ಮೃತ

Prasthutha|

ಕೊಲೊಂಬೊ: ಶ್ರೀಲಂಕಾ ಸೇನಾಪಡೆ ಆತಿಥ್ಯ ವಹಿಸಿದ್ದ ಮೋಟಾರ್ ಸ್ಪೋರ್ಟ್ ಸ್ಪರ್ಧೆಯ ಸಂದರ್ಭದಲ್ಲಿ ರೇಸ್ ಕಾರೊಂದು ಪ್ರೇಕ್ಷಕರೆಡೆಗೆ ನುಗ್ಗಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ. ಕಿಕ್ಕಿರಿದ ಜನಜಂಗುಳಿ ನೆರೆದಿದ್ದ ಸಂಭ್ರಮದಲ್ಲಿ 7 ಮಂದಿ ಸಾವೀಗೀಡಾಗಿದ್ದಲ್ಲದೆ, 21 ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

- Advertisement -

ಶ್ರೀಲಂಕಾ ಸೇನಾಪಡೆ ನಿರ್ವಹಿಸುತ್ತಿರುವ ಫಾಕ್ಸ್ ಹಿಲ್ ಸರ್ಕ್ಯೂಟ್‌ನ ರಕ್ಷಣಾರಹಿತ ಟ್ರ್ಯಾಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡು ಜನಜಂಗುಳಿಯ ಮೇಲೆ ಕಾರನ್ನು ನುಗ್ಗಿಸಿದ್ದರಿಂದಾಗಿ ಈ ಅನಾಹುತ ನಡೆದಿದೆ ಎಂದು ವರದಿಯಾಗಿದೆ.

Join Whatsapp