ಕತಾರ್| ವಿಶ್ವಕಪ್ ಪಂದ್ಯ ವೀಕ್ಷಿಸಲು ಬರುವವರಿಗೆ ಉಮ್ರಾ ನಿರ್ವಹಿಸಲು ಅನುಮತಿ

Prasthutha|

ದೋಹಾ: ಕತಾರ್‌ನಲ್ಲಿ ಫುಟ್ಬಾಲ್ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಬರುವವರಿಗೆ ಉಮ್ರಾ ಮಾಡಲು ಅನುಮತಿ ನೀಡಲಾಗಿದೆ. ಹಯ್ಯಾ ಕಾರ್ಡ್ ಹೊಂದಿರುವವರಿಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಉಚಿತ ವೀಸಾ ನೀಡಲಾಗುತ್ತದೆ ಎಂದು ವರದಿಯಾಗಿದೆ.

- Advertisement -

ಈ ಕಾರ್ಡು ಹೊಂದಿರುವವರು ಸೌದಿ ಅರೇಬಿಯಾಗೆ ಪ್ರವೇಶಿಸುವ ಮೊದಲು ಕತಾರ್‌ಗೆ ಪ್ರವೇಶಿಸಲೇಬೇಕೆಂದೇನೂ ಇಲ್ಲ. ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಬರುವವರಿಗೆ ಕತಾರ್ ನೀಡುವ ಹಯ್ಯಾ ಕಾರ್ಡ್ ಹೊಂದಿರುವವರಿಗೆ ಉಮ್ರಾ ನಿರ್ವಹಿಸಲು ಸೌದಿ ಅರೇಬಿಯಾ ಉಚಿತ ವೀಸಾವನ್ನು ನೀಡುತ್ತದೆ.  

ಹಯ್ಯಾ ಕಾರ್ಡ್ ಹೊಂದಿರುವವರು ಇಂದಿನಿಂದ ಸೌದಿ ಅರೇಬಿಯಾ ಪ್ರವೇಶಿಸಬಹುದು. ಆದರೆ ಅವರು ಸೌದಿ ಅರೇಬಿಯಾ ತಲುಪುವ ಮೊದಲು ವೈದ್ಯಕೀಯ ವಿಮೆಯನ್ನು ಪಡೆಯುವುದು ಕಡ್ಡಾಯವಾಗಿದೆ. ವೀಸಾ ಅವಧಿಯಲ್ಲಿ ಅವರು ಎಷ್ಟು ಬಾರಿ ಬೇಕಾದರೂ ಸೌದಿ ಅರೇಬಿಯಾಕ್ಕೆ ಬರಲು ಮತ್ತು ಹೋಗಲು ಅವಕಾಶ ನೀಡಲಾಗಿದೆ. ವಿಶ್ವಕಪ್ ಸಮಯದಲ್ಲಿ ಹಯ್ಯಾ ಕಾರ್ಡ್ ಹೊಂದಿರುವವರಿಗೆ ಸೌದಿ ಅರೇಬಿಯಾಗೆ ಭೇಟಿ ನೀಡಲು ಮತ್ತು ಕಡಿಮೆ ವೆಚ್ಚದಲ್ಲಿ ಅಲ್ಲಿ ಉಳಿಯಲು ಸೌದಿ ಅರೇಬಿಯಾ ಅವಕಾಶವನ್ನು ನೀಡಿದೆ.

Join Whatsapp