ಸಿಪಿಐ(ಎಂ)ನಿಂದ ಚುನಾವಣೆ ಹೈಜಾಕ್: ಕೆ.ಸಿ.ವೇಣುಗೋಪಾಲ್ ಆರೋಪ

Prasthutha|

ತಿರುವನಂತಪುರ: ಕೇರಳದಲ್ಲಿ ಲೋಕಸಭೆ ಚುನಾವಣೆಯನ್ನು ಸಿಪಿಐ(ಎಂ) ಹೈಜಾಕ್ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆರೋಪಿಸಿದ್ದಾರೆ.

- Advertisement -


ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಆಡಳಿತಾರೂಢ ಸಿಪಿಐ(ಎಂ) ಮತಯಂತ್ರವನ್ನು ಹೈಜಾಕ್ ಮಾಡಿರುವುದು 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸರಾಸರಿ ಮತದಾನ ಕಡಿಮೆಯಾಗಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.


ಕೇರಳದ ಆಲಪ್ಪುಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೇಣುಗೋಪಾಲ್, ಮತಗಟ್ಟೆಗಳಲ್ಲಿ ಮತದಾರರಿಗೆ ಅಧಿಕಾರಿಗಳಿಂದಲೂ ತೊಂದರೆ ಎದುರಾಗಿದೆ ಎಂದೂ ಆರೋಪಿಸಿದ್ದಾರೆ.

Join Whatsapp