ಪ್ರಜಾಪ್ರಭುತ್ವ ಸ್ಥಾಪಿಸಿ ರಕ್ತಪಾತ ನಿಲ್ಲಿಸಲು ಮ್ಯಾನ್ಮಾರ್ ಗೆ ವಿಶ್ವಸಂಸ್ಥೆ ತಾಕೀತು

Prasthutha|

ಹೊಸದಿಲ್ಲಿ: ಪ್ರಜಾಪ್ರಭುತ್ವ ಸ್ಥಾಪಿಸಿ ರಕ್ತಪಾತ ನಿಲ್ಲಿಸಲು ವಿಶ್ವಸಂಸ್ಥೆಯು ಮ್ಯಾನ್ಮಾರ್ ಗೆ ತಾಕೀತು ನೀಡಿದೆ.

- Advertisement -

ಮಿಲಿಟರಿ ಆಡಳಿತವನ್ನು ನಿಲ್ಲಿಸಿ ತಕ್ಷಣವೇ ಪ್ರಜಾಪ್ರಭುತ್ವಕ್ಕೆ ಮರಳುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಮ್ಯಾನ್ಮಾರ್ ಗೆ ನಿರ್ದೇಶನ ನೀಡಿದ್ದಾರೆ.  

“ಮ್ಯಾನ್ಮಾರ್ ನಲ್ಲಿನ ಮಿಲಿಟರಿ ಆಡಳಿತ ಮತ್ತು ರಕ್ತಸಿಕ್ತ ಸಂಘರ್ಷವು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿ (ASEAN) ಚರ್ಚೆಯ ವಿಷಯವಾಗಿದೆ. ರಕ್ತಪಾತವನ್ನು ಕೊನೆಗೊಳಿಸಲು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟವು ಇದುವರೆಗೆ ಹಲವಾರು ವಿಫಲ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿದೆ. ಆಂಗ್ ಸಾನ್ ಸೂಕಿ ಅವರ ಸರ್ಕಾರವನ್ನು ಮಿಲಿಟರಿ ಪದಚ್ಯುತಗೊಳಿಸಿದ ನಂತರ ಮ್ಯಾನ್ಮಾರ್ ರಕ್ತಸಿಕ್ತ ಸಂಘರ್ಷದಿಂದ ತತ್ತರಿಸಿದೆ. ಈಗ ವ್ಯವಸ್ಥೆಯು ಸಾವಿರಾರು ಜನರನ್ನು ಬಲಿತೆಗೆದುಕೊಂಡಿದೆ. ಮ್ಯಾನ್ಮಾರ್ ನಲ್ಲಿನ ಪರಿಸ್ಥಿತಿಯು ಜನರಿಗೆ ಎಂದಿಗೂ ಅಂತ್ಯವಿಲ್ಲದ ದುಃಸ್ವಪ್ನವಾಗಿದ್ದು ಇಡೀ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿದೆ” ಎಂದು ಗುಟೆರಸ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

- Advertisement -

Join Whatsapp