ಟೋಕಿಯೋ ಒಲಿಂಪಿಕ್ಸ್- ಬ್ಯಾಡ್ಮಿಂಟನ್ : ಪಿ.ವಿ ಸಿಂಧು ಸೆಮಿಫೈನಲ್’ಗೆ

Prasthutha|

ಟೋಕಿಯೋ, ಜು.30: ಟೊಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಪದಕದ ಭರವಸೆಯಾಗಿರುವ ಪಿ.ವಿ ಸಿಂಧು ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21-13, 22-20ರ ಅಂತರದಿಂದ ಜಪಾನ್ನ ಅಕನೆ ಯಾಮಗುಚಿ ವಿರುದ್ಧ ಸಿಂಧು
ಭರ್ಜರಿ ಜಯ ಸಾಧಿಸಿದ್ದಾರೆ.

- Advertisement -


ಮೊದಲ ಸೆಟ್’ ಅನ್ನು ಕೇವಲ 23 ನಿಮಿಷಗಳಲ್ಲಿ 21-13 ಅಂತರದಲ್ಲಿ ಸಿಂಧು ವಶಪಡಿಸಿಕೊಂಡರು. ಎರಡನೇ ಸೆಟ್ನಲ್ಲಿ ಮೊದಲಿಗೆ ಸಿಂಧು ಅವರು 11-6ರಿಂದ ಮುಂದಿದ್ದರು. ಆದರೆ ತೀವ್ರ ಪೈಪೋಟಿ ನೀಡಿದ ಯಾಮಗಚಿ, 20-20ರಲ್ಲಿ ಸೆಟ್ ಸಮಬಲವಾಗಿಸಿದ್ದರು. ಮತ್ತೆ ಲಯ ಕಂಡುಕೊಂಡ ಸಿಂಧು ಎರಡನೇ ಸೆಟ್ ಅನ್ನು 22-20ರಿಂದ ಗೆದ್ದು ಸಿಂಧು ಸೆಮಿಫೈನಲ್ ಪ್ರವೇಶಿಸಿದರು.


ಜಪಾನ್ನ ಅಕನೆ ಯಾಮಗುಚಿ ಅವರು ಈ ಮೊದಲು ವಿಶ್ವದ ಮೊದಲ ಶ್ರೇಯಾಂಕಿತ ಆಟಗಾರ್ತಿಯಾಗಿದ್ದರು. ಈಗ ವಿಶ್ವದ ಐದನೇ ಶ್ರೇಯಾಂಕದಲ್ಲಿದ್ದಾರೆ. ಈ ಮೊದಲು ಸಹ ಭಾರತದ ಸಿಂಧು ಅವರಿಗೆ ಜಪಾನ್ ಆಟಗಾರ್ತಿಯಿಂದ ತೀವ್ರ ಪೈಪೋಟಿ ಎದುರಾಗುತ್ತಿತ್ತು.

- Advertisement -


ಯಾಮಗುಚಿ ಅವರು ರಿಯೊ ಒಲಂಪಿಕ್ಸ್ನಲ್ಲೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಮೊದಲು ಸಿಂಧು ಹಾಗೂ ಯಾಮಗುಚಿ ನಡುವೆ ಒಟ್ಟು ಹದಿನೆಂಟು ಪಂದ್ಯಗಳು ನಡೆದಿದ್ದು ಅದರಲ್ಲಿ ಸಿಂಧು ಅವರು 11ರಲ್ಲಿ ಹಾಗೂ ಯಾಮಗುಚಿ ಏಳರಲ್ಲಿ ಜಯ ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಸಿಂಧು ಜಯದೊಂದಿಗೆ ಯಾಮಗುಚಿ ವಿರುದ್ಧ ಜಯದ ಸಂಖ್ಯೆ 12ಕ್ಕೇರಿದಂತಾಗಿದೆ. ಪ್ರಸ್ತುತ ಟೊಕಿಯೊ ಒಲಂಪಿಕ್ಸ್ನಲ್ಲಿ ಪಿ.ವಿ. ಸಿಂಧು ಅವರು 16ರ ಘಟ್ಟದಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಚ್ ಫೆಲ್ಟ್ ಅವರ ವಿರುದ್ಧ 21-15, 21-13 ಅಂತರದಲ್ಲಿ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದರು.

Join Whatsapp