ಬಿಹಾರದ ಕಟಿಹಾರ್ ಮೇಯರ್ ಗೆ ನಡುರಸ್ತೆಯಲ್ಲೇ ಗುಂಡು ಹಾರಿಸಿ ಹತ್ಯೆ; ಬಿಜೆಪಿಯ ನಾಲ್ವರು ಕಾರ್ಯಕರ್ತರ ಬಂಧನ

Prasthutha|

ಪಾಟ್ನಾ: ಬಿಹಾರದ ಕಟಿಹಾರ್ ಮೇಯರ್ ಶಿವರಾಜ್ ಪಾಸ್ವಾನ್ ಅವರ ಮೇಲೆ ಗುಂಡು ಹಾರಿಸಿ ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ನಡೆದಿದ್ದು, ಘಟನೆಗೆ ಬಿಹಾರ ಬೆಚ್ಚಿಬಿದ್ದಿದೆ. ಘಟನೆ ಸಂಬಂಧ ಶಿವರಾಜ್ ಪಾಸ್ವಾನ್ 11 ಜನರ ಮೇಲೆ ದೂರು ನೀಡಿದ್ದು, ಈ ಸಂಬಂಧ 4 ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ‘ಹಿಂದೂಸ್ತಾನ್’ ವರದಿ ಮಾಡಿವೆ.

- Advertisement -

ನಡುರಸ್ತೆಯಲ್ಲೇ ದುಷ್ಕರ್ಮಿಗಳು ನಡೆಸಿದ ಈ ಕೃತ್ಯಕ್ಕೆ ಬಿಹಾರ ರಾಜ್ಯವೇ ಬೆಚ್ಚಿಬಿದ್ದಿದೆ. ನಿನ್ನೆ ರಾತ್ರಿ (ಗುರುವಾರ) ತಮ್ಮ ಕೆಲಸ ಮುಗಿಸಿಕೊಂಡು, ಮನೆಗೆ ವಾಪಾಸಾಗುತ್ತಿದ್ದ ಮೇಯರ್​ರನ್ನು ಹತ್ಯೆ ಮಾಡಿರುವುದಾಗಿ ಮೂಲಗಳು ವರದಿ ಮಾಡಿವೆ.

ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೇಯರ್ ಶಿವರಾಜ್ ಪಾಸ್ವಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

- Advertisement -

ಮೇಯರ್ ಹತ್ಯೆ ಘಟನೆಯ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕತಿಹಾರ್ ಡಿಎಸ್​ಪಿ ಅಮರ್ ಕಾಂತ್ ಝಾ, ಸಂತೋಷಿ ಮಂದಿರ್ ಚೌಕಿ ಏರಿಯಾ ಬಳಿ ಈ ಹಲ್ಲೆ ನಡೆದಿದೆ. ಕಟಿಹಾರ್ ಮೇಯರ್ ಮನೆಗೆ ವಾಪಾಸ್ ತೆರಳುತ್ತಿದ್ದಾಗ ಇಬ್ಬರು ಮುಸುಕುಧಾರಿಗಳು ಅಡ್ಡಗಟ್ಟಿ ಗುಂಡು ಹಾರಿಸಿದ್ದಾರೆ. ಮೂರು ಗುಂಡುಗಳು ಮೇಯರ್ ಶಿವರಾಜ್ ಪಾಸ್ವಾನ್ ಅವರ ಎದೆಗೆ ತಗುಲಿವೆ. ಕತಿಹಾರ್ ಮೆಡಿಕಲ್ ಕಾಲೇಜಿನಲ್ಲಿ ಅವರನ್ನು ದಾಖಲಿಸಲಾಗಿತ್ತು. ಆದರೆ, ಎದೆಯೊಳಗೆ ಬುಲೆಟ್ ತಾಗಿ, ಗಂಭೀರವಾಗಿ ಗಾಯವಾಗಿದ್ದರಿಂದ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ತಮ್ಮ ಮನೆಗೆ ಕೂಗಳತೆ ದೂರದಲ್ಲೇ ಮೇಯರ್ ಶಿವರಾಜ್ ಪಾಸ್ವಾನ್ ಗುಂಡಿನ ದಾಳಿಯಿಂದ ಹೆಣವಾಗಿದ್ದಾರೆ. 9 ತಿಂಗಳ ಹಿಂದಷ್ಟೇ 38 ವರ್ಷದ ಶಿವರಾಜ್ ಪಾಸ್ವಾನ್ ಕಟಿಹಾರದ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದರು.

Join Whatsapp