ದಸರಾ ದೀಪಾಲಂಕಾರಕ್ಕೆ ತೆರಿಗೆ ಹಣ ದುರುಪಯೋಗ ಆರೋಪ | ಸಮಾನ ಮನಸ್ಕ ಸಂಘಟನೆಗಳ ಪ್ರತಿಭಟನೆ

Prasthutha|

ಮಂಗಳೂರು: ದಸರಾ ಹೆಸರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಹೊರಟಿದೆ ಎಂದು ಸಿಪಿಐಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.

- Advertisement -

ನಗರದ ಲಾಲ್ ಬಾಗ್ ನಲ್ಲಿರುವ ಪಾಲಿಕೆ ಕಚೇರಿ ಮುಂಭಾಗದಲ್ಲಿ ಸಮಾನ ಮನಸ್ಕ ಸಂಘಟನೆ, ಪಕ್ಷಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಪಾಲಿಕೆಯು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಹಲವು ನೆಪಗಳ ಮುಂದಿಟ್ಟುಕೊಂಡು ಅಭಿವೃದ್ಧಿ ಕೆಲಸವನ್ನು ಕುಂಠಿತಗೊಳಿಸಿದೆ. ಈ ಹಿಂದೆ ಅಭಿವೃದ್ಧಿ ಕೆಲಸಗಳಿಗಾಗಿ ಎಡಿಬಿಯಿಂದ ಎರಡು ಹಂತದಲ್ಲಿ ತಂದಿರುವ ಕೋಟ್ಯಾಂತರ ರೂಪಾಯಿ ಸಾಲವನ್ನು ಸಂದಾಯ ಮಾಡಲು ಬಾಕಿ ಇರಿಸಿದೆ. ಇಷ್ಟೊಂದು ಸಾಲ ಇರಿಸಿಕೊಂಡು ದಸರಾ ಹಬ್ಬದ ಹೆಸರಲ್ಲಿ ದೀಪಾಲಂಕಾರಕ್ಕಾಗಿ ಹಣ ವ್ಯಯಿಸುವುದು ಎಷ್ಟು ಸರಿ..? ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಈ ರೀತಿ‌ ಖರ್ಚು ಮಾಡಲು ಸರಕಾರಗಳ ನಿಯಮಗಳಲ್ಲಿ ಯಾವುದೇ ಅವಕಾಶಗಳಿಲ್ಲ. ಪಾಲಿಕೆಯ ಬಿಜೆಪಿ‌ ಆಡಳಿತ ಈ ಕೂಡಲೇ ಮಂಜೂರು‌ ಮಾಡಿರುವ 38 ಲಕ್ಷ ಹಣವನ್ನು ರದ್ದುಪಡಿಸಬೇಕು” ಎಂದು ಒತ್ತಾಯಿಸಿದರು.

- Advertisement -

ಪ್ರತಿಭನೆಯನ್ನು ಉದ್ದೇಶಿಸಿ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಜಯಂತಿ ಶೆಟ್ಟಿ,ಜೆಡಿಎಸ್ ನ ಸುಮತಿ ಎಸ್ ಹೆಗ್ಡೆ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ‌ಸಂತೋಷ್ ಬಜಾಲ್ ರವರು ಮಾತನಾಡಿದರು.

ಈ ವೇಳೆ ಡಿವೈಎಫ್ಐ ಮಂಗಳೂರು ನಗರ ಮುಖಂಡರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ಪ್ರಮೀಳಾ ಶಕ್ತಿನಗರ, ಮನೋಜ್ ಉರ್ವಾಸ್ಟೋರ್, ಸಿಪಿಐ ಪಕ್ಷದ ಮುಖಂಡರಾದ ವಿ.ಕುಕ್ಯಾನ್, ಕರುಣಾಕರ್, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಘುವೀರ್, CPIM ಮುಖಂಡರಾದ ಬಾಬು‌ ದೇವಾಡಿಗ, ಅಶೋಕ್ ಸಾಲ್ಯಾನ್ ಮತ್ತಿತ್ತರರು ಉಪಸ್ಥಿತರಿದ್ದರು.

Join Whatsapp