ಸಂಘಟನೆಯ ವಿರುದ್ಧದ ಅಪಪ್ರಚಾರಕ್ಕೆ ಕಾನೂನು ರೀತಿಯಲ್ಲಿ ಉತ್ತರ: ಒ.ಎಂ.ಎ. ಸಲಾಂ ಎಚ್ಚರಿಕೆ

Prasthutha|

ಸಂಘಟನೆಯ ವಿರುದ್ಧ ಫ್ಯಾಶಿಸ್ಟ್ ಶಕ್ತಿಗಳು ಮತ್ತು ಅವರ ಏಜೆಂಟರಿಂದ ಪ್ರಾರಂಭಿಸಲಾಗಿರುವ ಹೊಸ ಸುತ್ತಿನ ತೇಜೋವಧೆಯ ಅಭಿಯಾನವನ್ನು ಸಂಘಟನೆಯು ಅನಾವರಣಗೊಳಿಸಲಿದೆ ಮತ್ತು ಅದನ್ನು ಎದುರಿಸಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ. ಸಲಾಂ ತಿಳಿಸಿದ್ದಾರೆ.

- Advertisement -


ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಜೆಪಿ ಮತ್ತು ಅದರ ನಕಲಿ ಸುದ್ದಿ ವಾಹಿನಿಗಳು ಮತ್ತೊಮ್ಮೆ ಪಾಪ್ಯುಲರ್ ಫ್ರಂಟ್ ಅನ್ನು ಗುರಿಪಡಿಸಿ ಅದರ ತೇಜೋವಧೆ ನಡೆಸುವ ಹೊಸ ಸುತ್ತಿನ ಅಭಿಯಾನವನ್ನು ಪ್ರಾರಂಭಿಸಿವೆ. ಕಳೆದ ಎರಡು ದಿನಗಳಿಂದ ಮೂರು ವಿಭಿನ್ನ ವರದಿಗಳ ಮೂಲಕ ಸಂಘಟನೆಯ ಹೆಸರು ಕೆಡಿಸುವ ಪ್ರಯತ್ನಗಳು ನಡೆದವು. ಈ ತೇಜೋವಧೆಯ ಅಭಿಯಾನದ ಸಂದರ್ಭವನ್ನು ಗಮನಿಸುವುದಾದರೆ, ಇದು ಬಿಜೆಪಿ ಮತ್ತು ಆರೆಸ್ಸೆಸ್ ನ ಐಟಿ ಸೆಲ್ ನಿಂದ ಪ್ರಾರಂಭಿಸಲಾದ ಅಭಿಯಾನವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ರೀತಿಯ ಸುದ್ದಿಗಳು ಹೆಚ್ಚಾಗಿ ಸಂಘಪರಿವಾರದೊಂದಿಗೆ ಸಂಬಂಧ ಹೊಂದಿರುವ ಹಿಂದಿ ಮತ್ತು ಇಂಗ್ಲಿಷ್ ನ್ಯೂಸ್ ಪೋರ್ಟಲ್ ಗಳಲ್ಲಿ ಪ್ರಕಟವಾಗುವುದು ಕೂಡ ದೊಡ್ಡಮಟ್ಟದ ಯೋಜನೆಯ ಸುಳಿವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆಯು, ದತ್ತಿ ಸಂಸ್ಥೆಗಳು ಅನುಭವಿಸುತ್ತಿರುವ ಆದಾಯ ತೆರಿಗೆ ವಿನಾಯಿತಿಯಿಂದ ಪಾಪ್ಯುಲರ್ ಫ್ರಂಟನ್ನು ಹೊರಗಿಡುವ ರಾಜಕೀಯ ಪ್ರೇರಿತ ನಿರ್ಧಾರವನ್ನು ಕೈಗೊಂಡಿತ್ತು. ಸಂಘಟನೆಯು ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟವನ್ನು ಪ್ರಾರಂಭಿಸಿದೆ. ಯಾಕೆಂದರೆ, ಇದಕ್ಕೆ ನೀಡಲಾಗಿರುವ ಕಾರಣಗಳು ಸ್ವತಃ ರಾಜಕೀಯ ಪ್ರೇರಿತವಾಗಿವೆ ಮತ್ತು ಆದಾಯ ತೆರಿಗೆ ಇಲಾಖೆಯು ಬಿಜೆಪಿ ಸರಕಾರದಿಂದ ಸಿದ್ಧಪಡಿಸಲಾಗುತ್ತಿರುವ ಆರೋಪಗಳನ್ನು ಆಧರಿಸಿದ ದಾಖಲೆಗಳಿಗೆ ಸಹಿ ಹಾಕುತ್ತಾ ಕೇವಲ ರಬ್ಬರ್ ಸ್ಟ್ಯಾಂಪ್ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಇದೇ ಹಳೆಯ ಸುದ್ದಿಯನ್ನು ಹೊಸದಾಗಿ ಪ್ರಸ್ತುತಪಡಿಸಿ ಕೆಲವು ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ನಮ್ಮ ಸಂಘಟನೆಯ ತೇಜೋವಧೆ ನಡೆಸುವ ಯೋಜನೆಯ ಭಾಗವಾಗಿ ಹಳೆಯ ವಿಚಾರವನ್ನು ಸಂಶಯಾಸ್ಪದವಾಗಿ ತೋರಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದರೊಂದಿಗೆ ಪಾಪ್ಯುಲರ್ ಫ್ರಂಟ್, ರೊಹಿಂಗ್ಯಾ ವಲಸಿಗರ ಮೂಲಕ ಯುಪಿ ಚುನಾವಣೆಯಲ್ಲಿ ಅಕ್ರಮ ಎಸಗುವ ಪಿತೂರಿಯನ್ನು ನಡೆಸಿದೆ ಎಂಬ ಸುಳ್ಳು ಸುದ್ದಿಯನ್ನೂ ಹರಡಲಾಗುತ್ತಿದೆ ಎಂದು ಸಲಾಂ ತಿಳಿಸಿದ್ದಾರೆ.

- Advertisement -

ಈ ಆರೋಪ ಹೊರಿಸಿದ ಸನ್ನಿವೇಶವನ್ನು ಗಮನಿಸುವುದಾದರೆ, ಈ ತೇಜೋವಧೆಯ ಅಭಿಯಾನವು ಕೊರೋನ ಮಹಾಮಾರಿಯ ವೇಳೆ ವಿಶೇಷವಾಗಿ ಯುಪಿಯಲ್ಲಿ ಸರಕಾರದ ಗಂಭೀರ ಆಡಳಿತ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ನಡೆದ ಬಿಜೆಪಿಯ ಹತಾಶೆಯ ಸೃಷ್ಟಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ಇದೇ ರೀತಿ ಬಿಜೆಪಿ ಹಿನ್ನೆಲೆಯ ಕೆಲವು ಸುಳ್ಳು ಸುದ್ದಿ ಮಾಧ್ಯಮಗಳು ಕೇರಳದ ಒಂದು ಕಾಡಿನಿಂದ ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ಪಡೆದುಕೊಂಡ ವಿಚಾರಕ್ಕೆ ಸಂಬಂಧಿಸಿ ಪಾಪ್ಯುಲರ್ ಫ್ರಂಟನೊಂದಿಗೆ ನಿರಾಧಾರವಾಗಿ ನಂಟು ಕಲ್ಪಿಸಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ತನಿಖಾ ಏಜೆನ್ಸಿಗಳು ಇಂತಹ ಯಾವುದೇ ಹೇಳಿಕೆ ನೀಡಿಲ್ಲ. ಕೇರಳದಲ್ಲಿ ಒಂದು ದೊಡ್ಡ ಕಪ್ಪು ಹಣದ ವ್ಯವಹಾರ ಮತ್ತು ಅಕ್ರಮ ಹಣ ವರ್ಗಾವಣೆಯ ಕಾರಣದಿಂದ ಬಿಜೆಪಿಯ ಹಿರಿಯ ನಾಯಕರ ವಿರುದ್ಧ ತನಿಖೆ ಪ್ರಾರಂಭವಾದ ಬಳಿಕದಿಂದ ಪಕ್ಷವು ಸಂಕಷ್ಟಕ್ಕೆ ಸಿಲುಕಿದೆ. ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಇದು ದೇಶದ ಆರ್ಥಿಕತೆಯ ವಿರುದ್ಧದ ಅಪರಾಧವಾಗಿದೆ ಎಂದು ಬಣ್ಣಿಸಿದ್ದಾರೆ. ಇದು ಸ್ಪಷ್ಟವಾಗಿ ಕಪ್ಪು ಹಣವನ್ನು ಬಳಸಿಕೊಂಡು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಷ್ಟ ಉಂಟು ಮಾಡುವ ಬಿಜೆಪಿಯ ಒಂದು ಪ್ರಯತ್ನವಾಗಿತ್ತು. ಪಕ್ಷವು ಈ ವಿಚಾರದಿಂದ ಮಾಧ್ಯಮಗಳ ಗಮನ ಬೇರೆಡೆ ಸೆಳೆಯಲು ಬಯಸುತ್ತಿದೆ. ಸೋರಿಕೆಯಾದ ಒಂದು ಆಡಿಯೋದಲ್ಲಿ ಹಿರಿಯ ಬಿಜೆಪಿ ವಕ್ತಾರ, ಈ ವಿಚಾರದಲ್ಲಿ ಮಾಧ್ಯಮಗಳ ಚರ್ಚೆಯನ್ನು ಬೇರೆಡೆ ಸೆಳೆಯಲು ಪಕ್ಷವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಶಿಫಾರಸು ಮಾಡಿರುವುದು ಕಂಡು ಬಂದಿದೆ. ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ ಎಂದು ಕೇರಳ ಪೊಲೀಸರು, ರಾಜ್ಯ ತನಿಖಾ ಏಜೆನ್ಸಿಗಳು ಮತ್ತು ಪ್ರಾದೇಶಿಕ ಮಾಧ್ಯಮಗಳು ಹೇಳುತ್ತಿದ್ದರೂ, ಬಿಜೆಪಿ ಹಿನ್ನೆಲೆಯ ಮಾಧ್ಯಮದ ಒಂದು ವರ್ಗವು ಇದನ್ನು ಪಾಪ್ಯುಲರ್ ಫ್ರಂಟ್ ನೊಂದಿಗೆ ಸಂಬಂಧ ಕಲ್ಪಿಸಲು ಹತಾಶ ಪ್ರಯತ್ನ ನಡೆಸುತ್ತಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ತನ್ನ ಹೀನಾಯ ಸೋಲು ಮತ್ತು ಮುಂಬರುವ ಯುಪಿ ಚುನಾವಣೆಯಲ್ಲಿ ಜನರ ಮುಂದೆ ಪ್ರಸ್ತುತಪಡಿಸಲು ಬಿಜೆಪಿ ಬಳಿ ಯಾವುದೇ ಸಕಾರಾತ್ಮಕ ವಿಚಾರಗಳಿಲ್ಲ. ಈ ಕಾರಣದಿಂದಾಗಿ ಬಿಜೆಪಿ ಮತ್ತು ಸಂಘಪರಿವಾರ ಗಂಭೀರ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದೆ. ರಾಷ್ಟ್ರೀಯ ಭದ್ರತೆಯ ಕುರಿತು ಸಾಮೂಹಿಕ ಉನ್ಮಾದ ಸೃಷ್ಟಿ ಮತ್ತು ಮುಸ್ಲಿಮ್ ಸಮುದಾಯ ಹಾಗೂ ಮುಸ್ಲಿಮ್ ಸಂಘಟನೆಗಳ ಹೆಸರು ಕೆಡಿಸುವ ಮೂಲಕ ಇತರೆಲ್ಲಾ ರಾಜಕೀಯ ಪ್ರಶ್ನೆಗಳನ್ನು ಅಳಿಸಿಹಾಕಬಹುದು ಎಂಬುದಾಗಿ ಬಿಜೆಪಿ ಭಾವಿಸುತ್ತದೆ. ಹೀಗೆ ಮೊದಲು ಆಗಿದ್ದಿರಬಹುದು, ಆದರೆ ಈಗ ಈ ನಿರ್ಧಾರವು ವಿಪಕ್ಷಗಳು ಮತ್ತು ದೇಶದ ಮುಖ್ಯವಾಹಿನಿ ಮಾಧ್ಯಮಗಳ ಮೇಲಿದೆ. ಅವು ಅದೇ ಹಳೆಯ ತಂತ್ರಗಾರಿಕೆಗೆ ಬಲಿಯಾಗಲಿವೆಯೇ ಅಥವಾ ಅವು ಇದರ ನೈಜ ಮುಖವನ್ನು ಅನಾವರಣಗೊಳಿಸಲಿವೆಯೇ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಬಿಜೆಪಿಯ ಈ ರೀತಿಯ ಅಪಪ್ರಚಾರದ ವಿರುದ್ಧ ಗೆಲುವು ದಾಖಲಿಸುವುದು ಕೇವಲ ಬಿಜೆಪಿಯೇತರ ಪಕ್ಷಗಳ ಅಸ್ತಿತ್ವಕ್ಕೆ ಮಾತ್ರವಲ್ಲ, ಪ್ರಜಾಸತ್ತಾತ್ಮಕ ದೇಶದ ಸಾಂವಿಧಾನಿಕ ಮೌಲ್ಯಗಳ ಉಳಿವಿಗೂ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಸಂಘಟನೆಯ ಹೆಸರು ದುರ್ಬಳಕೆ ಮಾಡಿಕೊಂಡು ಜನರನ್ನು ದಾರಿ ತಪ್ಪಿಸುವ, ರಾಜಕೀಯ ವಿಚಾರಗಳನ್ನು ಹೈಜಾಕ್ ಮಾಡುವ, ಸುಳ್ಳು ಭಯೋತ್ಪಾದನಾ ನಿರೂಪಣೆಗಳ ಮೂಲಕ ಅಮಾಯಕರನ್ನು ಬಲಿಪಶು ಮಾಡುವುದನ್ನು ವೀಕ್ಷಿಸುತ್ತಾ ಪಾಪ್ಯುಲರ್ ಫ್ರಂಟ್ ಮೌನವಾಗಿರದು. ಪಾಪ್ಯುಲರ್ ಫ್ರಂಟ್ ಈ ಅಪಪ್ರಚಾರವನ್ನು ಎದುರಿಸಲಿದೆ ಮತ್ತು ಎಲ್ಲಾ ಕಾನೂನು ಮತ್ತು ಪ್ರಜಾಸತ್ತಾತ್ಮಕ ವಿಧಾನಗಳನ್ನು ಬಳಸಿಕೊಂಡು ದೇಶದ ಜನತೆಯ ಮುಂದೆ ಅನಾವರಣಗೊಳಿಸಲಿದೆ ಎಂದು ಒಎಂಎ ಸಲಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘಟನೆಯ ವಿರುದ್ಧ ಫ್ಯಾಶಿಸ್ಟ್ ಶಕ್ತಿಗಳು ಮತ್ತು ಅವರ ಏಜೆಂಟರಿಂದ ಪ್ರಾರಂಭಿಸಲಾಗಿರುವ ಹೊಸ ಸುತ್ತಿನ ತೇಜೋವಧೆಯ ಅಭಿಯಾನವನ್ನು ಸಂಘಟನೆಯು ಅನಾವರಣಗೊಳಿಸಲಿದೆ ಮತ್ತು ಅದನ್ನು ಎದುರಿಸಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ. ಸಲಾಂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬಿಜೆಪಿ ಮತ್ತು ಅದರ ನಕಲಿ ಸುದ್ದಿ ವಾಹಿನಿಗಳು ಮತ್ತೊಮ್ಮೆ ಪಾಪ್ಯುಲರ್ ಫ್ರಂಟ್ ಅನ್ನು ಗುರಿಪಡಿಸಿ ಅದರ ತೇಜೋವಧೆ ನಡೆಸುವ ಹೊಸ ಸುತ್ತಿನ ಅಭಿಯಾನವನ್ನು ಪ್ರಾರಂಭಿಸಿವೆ. ಕಳೆದ ಎರಡು ದಿನಗಳಿಂದ ಮೂರು ವಿಭಿನ್ನ ವರದಿಗಳ ಮೂಲಕ ಸಂಘಟನೆಯ ಹೆಸರು ಕೆಡಿಸುವ ಪ್ರಯತ್ನಗಳು ನಡೆದವು. ಈ ತೇಜೋವಧೆಯ ಅಭಿಯಾನದ ಸಂದರ್ಭವನ್ನು ಗಮನಿಸುವುದಾದರೆ, ಇದು ಬಿಜೆಪಿ ಮತ್ತು ಆರೆಸ್ಸೆಸ್ ನ ಐಟಿ ಸೆಲ್ ನಿಂದ ಪ್ರಾರಂಭಿಸಲಾದ ಅಭಿಯಾನವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ರೀತಿಯ ಸುದ್ದಿಗಳು ಹೆಚ್ಚಾಗಿ ಸಂಘಪರಿವಾರದೊಂದಿಗೆ ಸಂಬಂಧ ಹೊಂದಿರುವ ಹಿಂದಿ ಮತ್ತು ಇಂಗ್ಲಿಷ್ ನ್ಯೂಸ್ ಪೋರ್ಟಲ್ ಗಳಲ್ಲಿ ಪ್ರಕಟವಾಗುವುದು ಕೂಡ ದೊಡ್ಡಮಟ್ಟದ ಯೋಜನೆಯ ಸುಳಿವನ್ನು ನೀಡುತ್ತದೆ.

ಕೆಲ ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆಯು, ದತ್ತಿ ಸಂಸ್ಥೆಗಳು ಅನುಭವಿಸುತ್ತಿರುವ ಆದಾಯ ತೆರಿಗೆ ವಿನಾಯಿಯಿಂದ ಪಾಪ್ಯುಲರ್ ಫ್ರಂಟನ್ನು ಹೊರಗಿಡುವ ರಾಜಕೀಯ ಪ್ರೇರಿತ ನಿರ್ಧಾರವನ್ನು ಕೈಗೊಂಡಿತ್ತು. ಸಂಘಟನೆಯು ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟವನ್ನು ಪ್ರಾರಂಭಿಸಿದೆ. ಯಾಕೆಂದರೆ, ಇದಕ್ಕೆ ನೀಡಲಾಗಿರುವ ಕಾರಣಗಳು ಸ್ವತಃ ರಾಜಕೀಯ ಪ್ರೇರಿತವಾಗಿವೆ ಮತ್ತು ಆದಾಯ ತೆರಿಗೆ ಇಲಾಖೆಯು ಬಿಜೆಪಿ ಸರಕಾರದಿಂದ ಸಿದ್ಧಪಡಿಸಲಾಗುತ್ತಿರುವ ಆರೋಪಗಳನ್ನು ಆಧರಿಸಿದ ದಾಖಲೆಗಳಿಗೆ ಸಹಿ ಹಾಕುತ್ತಾ ಕೇವಲ ರಬ್ಬರ್ ಸ್ಟ್ಯಾಂಪ್ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಇದೇ ಹಳೆಯ ಸುದ್ದಿಯನ್ನು ಹೊಸದಾಗಿ ಪ್ರಸ್ತುತಪಡಿಸಿ ಕೆಲವು ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ನಮ್ಮ ಸಂಘಟನೆಯ ತೇಜೋವಧೆ ನಡೆಸುವ ಯೋಜನೆಯ ಭಾಗವಾಗಿ ಹಳೆಯ ವಿಚಾರವನ್ನು ಸಂಶಯಾಸ್ಪದವಾಗಿ ತೋರಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದರೊಂದಿಗೆ ಪಾಪ್ಯುಲರ್ ಫ್ರಂಟ್ ರೊಹಿಂಗ್ಯಾ ವಲಸಿಗರ ಮೂಲಕ ಯುಪಿ ಚುನಾವಣೆಯಲ್ಲಿ ಅಕ್ರಮ ಎಸಗುವ ಪಿತೂರಿಯನ್ನು ನಡೆಸಿದೆ ಎಂಬ ಸುಳ್ಳು ಸುದ್ದಿಯನ್ನೂ ಹರಡಲಾಗುತ್ತಿದೆ.

ಈ ಆರೋಪ ಹೊರಿಸಿದ ಸನ್ನಿವೇಶವನ್ನು ಗಮನಿಸುವುದಾದರೆ, ಈ ತೇಜೋವಧೆಯ ಅಭಿಯಾನವು ಕೊರೋನ ಮಹಾಮಾರಿಯ ವೇಳೆ ವಿಶೇಷವಾಗಿ ಯುಪಿಯಲ್ಲಿ ಸರಕಾರದ ಗಂಭೀರ ಆಡಳಿತ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ನಡೆದ ಬಿಜೆಪಿಯ ಹತಾಶೆಯ ಸೃಷ್ಟಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ಇದೇ ರೀತಿ ಬಿಜೆಪಿ ಹಿನ್ನೆಲೆಯ ಕೆಲವು ಸುಳ್ಳು ಸುದ್ದಿ ಮಾಧ್ಯಮಗಳು ಕೇರಳದ ಒಂದು ಕಾಡಿನಿಂದ ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ಪಡೆದುಕೊಂಡ ವಿಚಾರಕ್ಕೆ ಸಂಬಂಧಿಸಿ ಪಾಪ್ಯುಲರ್ ಫ್ರಂಟನೊಂದಿಗೆ ನಿರಾಧಾರವಾಗಿ ನಂಟು ಕಲ್ಪಿಸಲು ಪ್ರಯತ್ನಿಸುತ್ತಿವೆ. ಆದಾಗ್ಯೂ, ತನಿಖಾ ಏಜೆನ್ಸಿಗಳು ಇಂತಹ ಯಾವುದೇ ಹೇಳಿಕೆ ನೀಡಿಲ್ಲ. ಕೇರಳದಲ್ಲಿ ಒಂದು ದೊಡ್ಡ ಕಪ್ಪು ಹಣದ ವ್ಯವಹಾರ ಮತ್ತು ಅಕ್ರಮ ಹಣ ವರ್ಗಾವಣೆಯ ಕಾರಣದಿಂದ ಬಿಜೆಪಿಯ ಹಿರಿಯ ನಾಯಕರ ವಿರುದ್ಧ ತನಿಖೆ ಪ್ರಾರಂಭವಾದ ಬಳಿಕದಿಂದ ಪಕ್ಷವು ಸಂಕಷ್ಟಕ್ಕೆ ಸಿಲುಕಿದೆ. ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಇದು ದೇಶದ ಆರ್ಥಿಕತೆಯ ವಿರುದ್ಧದ ಅಪರಾಧವಾಗಿದೆ ಎಂದು ಬಣ್ಣಿಸಿದ್ದಾರೆ.

ಇದು ಸ್ಪಷ್ಟವಾಗಿ ಕಪ್ಪು ಹಣವನ್ನು ಬಳಸಿಕೊಂಡು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಷ್ಟ ಉಂಟು ಮಾಡುವ ಬಿಜೆಪಿಯ ಒಂದು ಪ್ರಯತ್ನವಾಗಿತ್ತು. ಪಕ್ಷವು ಈ ವಿಚಾರದಿಂದ ಮಾಧ್ಯಮಗಳ ಗಮನ ಬೇರೆಡೆ ಸೆಳೆಯಲು ಬಯಸುತ್ತಿದೆ. ಸೋರಿಕೆಯಾದ ಒಂದು ಆಡಿಯೋದಲ್ಲಿ ಹಿರಿಯ ಬಿಜೆಪಿ ವಕ್ತಾರ, ಈ ವಿಚಾರದಲ್ಲಿ ಮಾಧ್ಯಮಗಳ ಚರ್ಚೆಯನ್ನು ಬೇರೆಡೆ ಸೆಳೆಯಲು ಪಕ್ಷವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಶಿಫಾರಸು ಮಾಡಿರುವುದು ಕಂಡು ಬಂದಿದೆ. ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ ಎಂದು ಕೇರಳ ಪೊಲೀಸರು, ರಾಜ್ಯ ತನಿಖಾ ಏಜೆನ್ಸಿಗಳು ಮತ್ತು ಪ್ರಾದೇಶಿಕ ಮಾಧ್ಯಮಗಳು ಹೇಳುತ್ತಿದ್ದರೂ, ಬಿಜೆಪಿ ಹಿನ್ನೆಲೆಯ ಮಾಧ್ಯಮದ ಒಂದು ವರ್ಗವು ಇದನ್ನು ಪಾಪ್ಯುಲರ್ ಫ್ರಂಟ್ ನೊಂದಿಗೆ ಸಂಬಂಧ ಕಲ್ಪಿಸಲು ಹತಾಶ ಪ್ರಯತ್ನ ನಡೆಸುತ್ತಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ತನ್ನ ಹೀನಾಯ ಸೋಲು ಮತ್ತು ಮುಂಬರುವ ಯುಪಿ ಚುನಾವಣೆಯಲ್ಲಿ ಜನರ ಮುಂದೆ ಪ್ರಸ್ತುತಪಡಿಸಲು ಬಿಜೆಪಿ ಬಳಿ ಯಾವುದೇ ಸಕಾರಾತ್ಮಕ ವಿಚಾರಗಳಿಲ್ಲ. ಈ ಕಾರಣದಿಂದಾಗಿ ಬಿಜೆಪಿ ಮತ್ತು ಸಂಘಪರಿವಾರ ಗಂಭೀರ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದೆ. ರಾಷ್ಟ್ರೀಯ ಭದ್ರತೆಯ ಕುರಿತು ಸಾಮೂಹಿಕ ಉನ್ಮಾದ ಸೃಷ್ಟಿ ಮತ್ತು ಮುಸ್ಲಿಮ್ ಸಮುದಾಯ ಹಾಗೂ ಮುಸ್ಲಿಮ್ ಸಂಘಟನೆಗಳ ಹೆಸರು ಕೆಡಿಸುವ ಮೂಲಕ ಇತರೆಲ್ಲಾ ರಾಜಕೀಯ ಪ್ರಶ್ನೆಗಳನ್ನು ಅಳಿಸಿಹಾಕಬಹುದು ಎಂಬುದಾಗಿ ಬಿಜೆಪಿ ಭಾವಿಸುತ್ತದೆ. ಹೀಗೆ ಮೊದಲು ಆಗಿದ್ದಿರಬಹುದು, ಆದರೆ ಈಗ ಈ ನಿರ್ಧಾರವು ವಿಪಕ್ಷಗಳು ಮತ್ತು ದೇಶದ ಮುಖ್ಯವಾಹಿನಿ ಮಾಧ್ಯಮಗಳ ಮೇಲಿದೆ. ಅವು ಅದೇ ಹಳೆಯ ತಂತ್ರಗಾರಿಕೆಗೆ ಬಲಿಯಾಗಲಿವೆಯೇ ಅಥವಾ ಅವು ಇದರ ನೈಜ ಮುಖವನ್ನು ಅನಾವರಣಗೊಳಿಸಲಿವೆಯೇ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಬಿಜೆಪಿಯ ಈ ರೀತಿಯ ಅಪಪ್ರಚಾರದ ವಿರುದ್ಧ ಗೆಲುವು ದಾಖಲಿಸುವುದು ಕೇವಲ ಬಿಜೆಪಿಯೇತರ ಪಕ್ಷಗಳ ಅಸ್ತಿತ್ವಕ್ಕೆ ಮಾತ್ರವಲ್ಲ, ಪ್ರಜಾಸತ್ತಾತ್ಮಕ ದೇಶದ ಸಾಂವಿಧಾನಿಕ ಮೌಲ್ಯಗಳ ಉಳಿವಿಗೂ ಅತ್ಯಗತ್ಯವಾಗಿದೆ.

ಸಂಘಟನೆಯ ಹೆಸರು ದುರ್ಬಳಕೆ ಮಾಡಿಕೊಂಡು ಜನರನ್ನು ದಾರಿ ತಪ್ಪಿಸುವ, ರಾಜಕೀಯ ವಿಚಾರಗಳನ್ನು ಹೈಜಾಕ್ ಮಾಡುವ, ಸುಳ್ಳು ಭಯೋತ್ಪಾದನಾ ನಿರೂಪಣೆಗಳ ಮೂಲಕ ಅಮಾಯಕರನ್ನು ಬಲಿಪಶು ಮಾಡುವುದನ್ನು ವೀಕ್ಷಿಸುತ್ತಾ ಪಾಪ್ಯುಲರ್ ಫ್ರಂಟ್ ಮೌನವಾಗಿರದು. ಪಾಪ್ಯುಲರ್ ಫ್ರಂಟ್ ಈ ಅಪಪ್ರಚಾರವನ್ನು ಎದುರಿಸಲಿದೆ ಮತ್ತು ಎಲ್ಲಾ ಕಾನೂನು ಮತ್ತು ಪ್ರಜಾಸತ್ತಾತ್ಮಕ ವಿಧಾನಗಳನ್ನು ಬಳಸಿಕೊಂಡು ದೇಶದ ಜನತೆಯ ಮುಂದೆ ಅನಾವರಣಗೊಳಿಸಲಿದೆ.

Join Whatsapp