March 5, 2021

NPR ಹಮ್ಮಿಕೊಳ್ಳುವ ಕೇಂದ್ರದ ನಡೆಯ ಬಗ್ಗೆ ಜಾಗೃತರಾಗಿರಿ : ಪಾಪ್ಯುಲರ್ ಫ್ರಂಟ್

ಜನಗಣತಿಯೊಂದಿಗೆ NPR ಹಮ್ಮಿಕೊಳ್ಳುವ ಕೇಂದ್ರ ಸರಕಾರದ ನಡೆಯ ವಿರುದ್ಧ CAA, NRC ಮತ್ತು NPR ವಿರೋಧಿ ನಿಲುವು ಹೊಂದಿರುವ ಎಲ್ಲಾ ರಾಜ್ಯ ಸರಕಾರಗಳು, ಪಕ್ಷಗಳು ಮತ್ತು ಎಲ್ಲಾ ವರ್ಗಗಳ ಜನರು ಜಾಗೃತರಾಗಿರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ O.M.A ಸಲಾಂ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ(RGI) ಆಪ್ ವೊಂದನ್ನು ಬಳಸಿಕೊಂಡು ಜನಗಣತಿಯ ಜೊತೆಜೊತೆಗೆ ವಿವಾದಾಸ್ಪದ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಾರ್(NPR)ಗೆ ಕೂಡ ಕ್ಷೇತ್ರ ಪ್ರಯೋಗ ನಡೆಸುವ ಸಿದ್ಧತೆಯಲ್ಲಿದೆ ಎಂಬ ಸುದ್ದಿಗಳು ಬರುತ್ತಿವೆ. ತಮ್ಮ ದೇಶವಾಸಿಗಳನ್ನು ಧರ್ಮದ ಆಧಾರದ ಮೇಲೆ ಪೌರತ್ವದ ಹಕ್ಕಿನಿಂದ ವಂಚಿತರನ್ನಾಗಿಸುವುದನ್ನು ಜನರು ಬಯಸುವುದಿಲ್ಲ. ಇದೇ ಕಾರಣಕ್ಕಾಗಿ ಅಸಂವಿಧಾನಿಕ ಪೌರತ್ವ ಕಾಯ್ದೆ ಮತ್ತು NPR ಹಾಗೂ NRC ಪ್ರಕ್ರಿಯೆಯ ವಿರುದ್ಧ ಒಂದು ವರ್ಷದ ಹಿಂದೆ ಅವರು ಬೀದಿಗಿಳಿದಿದ್ದರು. ಬಹುತೇಕ ಬಿಜೆಪಿಯೇತರ ಪಕ್ಷಗಳು ಈ ಕಾನೂನಿನ ವಿರುದ್ಧ ನಿಲುವು ತಾಳಿದ್ದರು ಮತ್ತು ಹಲವು ರಾಜ್ಯ ಸರಕಾರಗಳು ಇದರ ವಿರುದ್ಧ ನಿರ್ಣಯವನ್ನೂ ಕೈಗೊಂಡಿದ್ದವು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶದಲ್ಲಿ NRC ಜಾರಿಗೊಳಿಸುವ ಯೋಜನೆ ಸರಕಾರ ಹೊಂದಿಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದ್ದರು. ಇದರ ಹೊರತಾಗಿಯೂ, NPR ನಡೆಯು ಪ್ರಧಾನಿಯವರ ಮಾತಿನಲ್ಲಿ ಭರವಸೆ ಹೊಂದುವುದು ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ. NPR ಮತ್ತು NRCಗೆ ಸಂಬಂಧವಿಲ್ಲ ಎಂದು ಬಿಜೆಪಿ ಪ್ರತಿಪಾದಿಸುತ್ತದೆಯಾದರೂ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ದೇಶಾದ್ಯಂತ NRC ಜಾರಿಗೊಳಿಸುವುದರತ್ತ ಒಂದು ದೊಡ್ಡ ಹೆಜ್ಜೆಯಾಗಿದೆ ಎಂಬುದು ವಾಸ್ತವವಾಗಿದೆ. ಏಕೆಂದರೆ, NPR ಮೂಲಕ ಸಂಗ್ರಹಿಸಲಾದ ದತ್ತಾಂಶದಿಂದಲೇ NRC ನಡೆಸಲಾಗುತ್ತದೆ.

ಈ ಜನವಿರೋಧಿ ನಡೆಗಳ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸಬೇಕೆಂದು, ಒಂದು ವರ್ಷದ ಹಿಂದೆ CAA-NRC-NPR ವಿರೋಧಿ ಹೋರಾಟ ನಡೆಸಿದ ಎಲ್ಲರೊಂದಿಗೂ ಪಾಪ್ಯುಲರ್ ಫ್ರಂಟ್ ಮನವಿ ಮಾಡಿದೆ. ಅದೇ ರೀತಿ ಈ ಹೋರಾಟವನ್ನು ಬೆಂಬಲಿಸುವುದರ ಜೊತೆಗೆ ಸಿಎಎ ವಿರುದ್ಧ ನಿಲುವು ತಾಳಿದ್ದ ಎಲ್ಲಾ ಪಕ್ಷಗಳು ಮತ್ತು ರಾಜ್ಯ ಸರಕಾರಗಳೂ ತಮ್ಮ ಮಾತಿಗೆ ಬದ್ಧರಾಗಿ NPR ನಡೆಯ ವಿರುದ್ಧ ಧ್ವನಿ ಎತ್ತಬೇಕೆಂದೂ ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!