ಕೊಳವೆ ಬಾವಿಗೆ ಶೀಘ್ರದಲ್ಲೇ ಪಂಪ್ ಅಳವಡಿಸುವಂತೆ ಕೋರಿ SDPI ಯಿಂದ ಎಡಮಂಗಳ ಪಂಚಾಯತ್ ಗೆ ಮನವಿ

Prasthutha: March 5, 2021

ನಿಂತಿಕಲ್ :  ಎಡಮಂಗಳ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಎಣ್ಮೂರು ಗ್ರಾಮದ ಉಳ್ಳಲಾಡಿ ಎಂಬಲ್ಲಿ ಕೊಳವೆ ಬಾವಿಗೆ ಶೀಘ್ರದಲ್ಲೇ ಪಂಪ್ ಅಳವಡಿಸುವಂತೆ ಕೋರಿ SDPI ಎಡಮಂಗಳ ಪಂಚಾಯತ್ ಗೆ ಮನವಿ ಸಲ್ಲಿಸಿದೆ.

ಎಣ್ಮೂರು ಗ್ರಾಮದ ಉಳ್ಳಲಾಡಿ ಎಂಬಲ್ಲಿ ಸುಮಾರು 25 ಮನೆಗಳಿದ್ದು, ನೀರಿಗಾಗಿ ನಿತ್ಯ ಪರಿತಪಿಸುವಂತಾಗಿದೆ, ಎರಡು ವರ್ಷಗಳ ಹಿಂದೆಯೇ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪಂಚಾಯತ್ ವತಿಯಿಂದ ಕೊಳವೆಬಾವಿ ಕೊರೆಯಲಾಗಿತ್ತು ಆದರೆ ಇಂದಿನವರೆಗೂ ಅದಕ್ಕೆ ಮೋಟಾರ್ ಅಳವಡಿಸದೆ ನಿರ್ಲಕ್ಷ್ಯ ತೋರಿದ್ದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಜನರು ಪ್ರತೀ ದಿನ ನೀರಿಗಾಗಿ ಕಷ್ಟಪಡುವಂತಾಗಿದೆ. ಸದ್ಯಕ್ಕೆ ಒಂದು ಕೈ ಕೊಳವೆಬಾವಿ ಇದ್ದು, ಅದರಲ್ಲಿ ನೀರು ಬರಬೇಕಾದರೆ ಹತ್ತು ನಿಮಿಷ ಕಾಯಬೇಕಾಗುತ್ತದೆ. ಅದಲ್ಲದೇ ಈ ಕೊಳವೆ ಬಾವಿಯ ನೀರು ಕಬ್ಬಿಣದ ವಾಸನೆ ಬರುವುದರಿಂದ ಕುಡಿಯಲು ಅಷ್ಟು ಯೋಗ್ಯವಲ್ಲ, ಆದರೆ ಅನಿವಾರ್ಯವಾಗಿ ಅದನ್ನೇ ಕುಡಿಯುವಂತಾಗಿದೆ.

ಈ ಹಿಂದೆ ಈ ಗ್ರಾಮ ಎಣ್ಮೂರು ಗ್ರಾಮ ಪಂಚಾಯತ್‌ಗೆ ಒಳಪಟ್ಟಿತ್ತು, ಅಲ್ಲಿಯ ಅಧಿಕಾರಿಗಳಲ್ಲಿ ವಿಚಾರಿಸುವಾಗ ಅದಕ್ಕೆ ಸಂಬಂದಪಟ್ಟ ಎಲ್ಲಾ ಕಡತಗಳನ್ನು ಎಡಮಂಗಳ ಗ್ರಾಮ ಪಂಚಾಯತ್‌ಗೆ ವರ್ಗಾಯಿಸಿದ್ದೇವೆ ಎಂದು ಮೌಖಿಕವಾಗಿ ತಿಳಿಸಿರುತ್ತಾರೆ.

ಹಾಗಾಗಿ ಸಂಬಂಧಪಟ್ಟವರು ಈ ಕೂಡಲೇ ಗಮನಹರಿಸಿ ಇಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕು, ಸಮಸ್ಯೆ ಇತ್ಯರ್ಥವಾಗದೇ ಇದ್ದಲ್ಲಿ ಸ್ಥಳೀಯ ನಾಗರಿಕರನ್ನು ಸೇರಿಸಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದೆಂದು ಮನವಿಯಲ್ಲಿ ತಿಳಿಸಲಾಗಿದೆ‌.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಎಣ್ಮೂರು ವಲಯಧ್ಯಕ್ಷರಾದ ಹಮೀದ್ ಮರಕ್ಕಡ, ವಲಯ ಸಮಿತಿ ಸದಸ್ಯ ಹಮೀದ್ ಕಲ್ಲೇರಿ, ಶರೀಫ್ ಗುತ್ತಿಗೆ ಮತ್ತು ನೀರು ಬಳಕೆದಾರರಾದ ಅಬ್ದುಲ್ಲ ಕುಂಞಿ ಉಪಸ್ಥಿತರಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!