ಕಣ್ಣಿನಿಂದ ನೋಡಲಾಗದ ದೃಶ್ಯಗಳು ಆ ಸಿಡಿಯಲ್ಲಿದೆ | ಯಡಿಯೂರಪ್ಪ ಸಿಡಿ ಕುರಿತು ಯತ್ನಾಳ್ ಹೇಳಿಕೆಯ ವೀಡಿಯೋ ಮತ್ತೆ ವೈರಲ್ !!

Prasthutha|

ರಮೇಶ್ ಜಾರಕಿಹೊಳಿ ಸೆಕ್ಸ್ ಹಗರಣ ಬೆಳಕಿಗೆ ಬಂದ ನಂತರ ಇದೀಗ ರಾಜ್ಯದಲ್ಲಿ ರಾಜಕಾರಣಿಗಳ ಸಿಡಿ ವಿಚಾರಗಳೇ  ಹೆಚ್ಚಾಗಿ  ಚರ್ಚೆ ನಡೆಯುತ್ತಿದೆ. ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟುತ್ತಾ ಮಾತನಾಡಲು ಪ್ರಾರಂಭಿಸಿ ತಿಂಗಳುಗಳೇ ಕಳೆದು ಹೋಗಿದೆ. ಈ ನಡುವೆ ಒಂದೆರಡು ತಿಂಗಳ ಹಿಂದೆ ಯತ್ನಾಳ್ ಅವರು ಸಿಡಿ ಒಂದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ ಆ ಸಿಡಿಯಲ್ಲಿ ಕಣ್ಣಿನಿಂದ ನೋಡಬಾರದ ದೃಶ್ಯಗಳಿವೆ. ಅದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ ಬಳಿಯೂ ಇದೆ. ಇದನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳನ್ನು ಬ್ಲಾಕ್ಮೇಲ್ ಮಾಡಲಾಗುತ್ತಿದೆ” ಎಂದವರು ಹೇಳಿಕೆ ನೀಡಿದ್ದರು.  ರಮೇಶ್ ಜಾರಕಿಹೊಳಿ ಪ್ರಕರಣ ಬೆಳಕಿಗೆ ಬಂದ ನಂತರ ಇದೀಗ ಆ ವೀಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.

ಆ ವೀಡಿಯೋದಲ್ಲಿ ಮಾತನಾಡಿದ್ದ ಯತ್ನಾಳ್ ರೊಂದಿಗೆ ಪತ್ರಕರ್ತರು ನೀವು ಯಾರ ಸಿಡಿ ಬಗ್ಗೆ ಹೇಳುತ್ತಿದ್ದೀರಿ  ಎಂಬ ಪ್ರಶ್ನೆಗೆ, “ ನಾನು ಸ್ಪಷ್ಟವಾಗಿಯೇ ಹೇಳಿದ್ದೇನೆ. ಆ ಸಿಡಿ ಮುಖ್ಯಮಂತ್ರಿ ಯಡಿಯೂರಪ್ಪನವರದ್ದು. ಅದರಲ್ಲಿ ಕಣ್ಣಿನಲ್ಲಿ ನೋಡಬಾರದ ದೃಶ್ಯಗಳಿವೆ. ಅದು ಮಾತ್ರವಲ್ಲ ಅದನ್ನು ಖುದ್ದು ಮುಖ್ಯಮಂತ್ರಿಗಳ ಮೊಮ್ಮಗನೇ ಆ ವೀಡಿಯೋ ಮಾಡಿದ್ದಾಗಿ  ಅವರು ಬಹಿರಂಗಪಡಿಸಿದ್ದಾರೆ.

- Advertisement -

ಒಟ್ಟಿನಲ್ಲಿ ಸಿಡಿ ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳ ಮಧ್ಯೆಯೇ ಬಿಜೆಪಿಗೆ ಸ್ವಪಕ್ಷೀಯರಾಗಿರುವ ಯತ್ನಾಳ್ ವಿವಾದಾತ್ಮಕ ಹೇಳಿಕೆಗಳು ಕೂಡಾ ಕಗ್ಗಂಟಾಗಿ ಪರಿಣಮಿಸುತ್ತಿದೆ. ಬಜೆಟ್ ಅಧಿವೇಶನ ನಡೆಯುತ್ತಿರುವ ವೇಳೆಯೇ ಇವೆಲ್ಲಾ ಪ್ರಕರಣಗಳನ್ನು ನಿಭಾಯಿಸಲು ಬಿಜೆಪಿ ಹರಸಾಹಸ ಪಡುತ್ತಿದೆ

- Advertisement -