ಸಿಬಿಐ ನಿರ್ದೇಶಕರ ಅವಧಿ ವಿಸ್ತರಣೆ: ಸಂಸತ್ ಅನುಮೋದನೆ

Prasthutha|

ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರ ಆಡಳಿತ ಅವಧಿಯನ್ನು ಎರಡು ವರ್ಷದಿಂದ ಗರಿಷ್ಟ 5 ವರ್ಷ ಅವಧಿಗೆ ವಿಸ್ತರಿಸುವ ಮಸೂದೆಯನ್ನು ಸಂಸತ್ ಮಂಗಳವಾರ ಅನುಮೋದಿಸಿದೆ.

- Advertisement -

ರಾಜ್ಯ ಸಭೆಯ 12 ಸದಸ್ಯರ ಅಮಾನತು ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟಿಸಿದ ನಡುವೆ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ “ ದೆಹಲಿ ಪೊಲೀಸ್ ಸ್ಥಾಪನೆ ತಿದ್ದುಪಡಿ ಕಾಯ್ದೆ 2021 ಅನ್ನು ಮಂಡಿಸಿದರು.

ಸಿಬಿಐ ನಿರ್ದೇಶಕರ ಅಧಿಕಾರ ಅವಧಿಯನ್ನು ವಿಸ್ತರಿಸಲು ದೆಹಲಿ ಪೊಲೀಸ್ ಸ್ಥಾಪನೆ ತಿದ್ದುಪಡಿ ಕಾಯ್ದೆ 2021 ಮತ್ತು ಈಡಿ ನಿರ್ದೇಶಕರ ಅಧಿಕಾರ ಅವಧಿಯನ್ನು ವಿಸ್ತರಿಸಲು ಕೇಂದ್ರೀಯ ಜಾಗೃತ ಆಯೋಗ ತಿದ್ದುಪಡಿ ಕಾಯ್ದೆ 2021 ಯ ಮೂಲಕ ಜಾರಿಗೆ ತರಲು ಕೇಂದ್ರ ಸರ್ಕಾರ ಈ ಹಿಂದೆ ಪರಮಾನು ಹೊರಡಿಸಿತ್ತು.

Join Whatsapp