ಜೆರುಸಲೇಂ: ಶಾಂತಿ ಪಾಲುದಾರಿಕೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ ಇಸ್ರೇಲನ್ನು ಪ್ಯಾಲೆಸ್ತೀನ್ ಹೊರಗಿಟ್ಟಿದೆ ಎಂದು ಪ್ಯಾಲೆಸ್ತಿನ್ ಅಧ್ಯಕ್ಷ ಮೆಹಮೂದ್ ಅಬ್ಬಾಸ್ ಹೇಳಿದ್ದಾರೆ.
ಇಸ್ರೇಲ್ ದೇಶವು ಅಂತಾರಾಷ್ಟ್ರೀಯ ನ್ಯಾಯಸಮ್ಮತ ನಿರ್ಣಯಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಯುಕ್ತ ರಾಷ್ಟ್ರಗಳ ಒಕ್ಕೂಟದ ಚರ್ಚಾ ಸಭೆಯಲ್ಲಿ ನುಡಿದರು. ಪ್ಯಾಲೆಸ್ಟೈನ್ ಲಿಬರೇಷನ್ ಆರ್ಗನೈಜೇಷನ್ ವತಿಯಿಂದ ಸಹಿ ಹಾಕಿರುವ ಓಸ್ಲೋ ಒಪ್ಪಂದಗಳನ್ನು ನಿರ್ಲಕ್ಷಿಸಿರುವ ಇಸ್ರೇಲ್ ತನ್ನ ಪೂರ್ವನಿಯೋಜಿತ ಹಾಗೂ ಉದ್ದೇಶಪೂರ್ವಕ ಕೃತ್ಯಗಳು ಮೂಲಕ ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸುತ್ತಿದೆ. ಹೀಗಾಗಿ ಇಸ್ರೇಲ್ ಶಾಂತಿಯನ್ನು ಬಯಸುವುದಿಲ್ಲ ಎಂಬ ವಿಷಯ ನಿಸ್ಸಂದೇಹಕವಾಗಿದೆ.
1993ರಲ್ಲಿ ನಡೆಸಿದ ಒಪ್ಪಂದವನ್ನು ಪ್ಯಾಲೆಸ್ಟೈನ್ ಏಕೈಕವಾಗಿ ಪಾಲಿಸಲು ಸಿದ್ಧವಿಲ್ಲ ಎಂದು ಕೂಡ ಅವರು ಈ ಸಂದರ್ಭದಲ್ಲಿ ತಿಳಿಸಿದ