ಬಿಹಾರದಲ್ಲಿ ಬಿಜೆಪಿ ಸೋತ ಬಳಿಕ ಅಮಿತ್ ಶಾಗೆ ಹುಚ್ಚು ಹಿಡಿದಿದೆ: ಲಾಲು ಯಾದವ್ ವಾಗ್ದಾಳಿ

ನವದೆಹಲಿ: ಬಿಹಾರದ ಆಡಳಿತಾರೂಢ ಮೈತ್ರಿಕೂಟದ ವಿರುದ್ಧ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿರುವ ಬಗ್ಗೆ ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಶನಿವಾರ ವಾಗ್ದಾಳಿ ನಡೆಸಿದ್ದು, ಬಿಹಾರದಲ್ಲಿ ಬಿಜೆಪಿಗೆ ಸರಕಾರ ಕೈತಪ್ಪಿದ ಬಳಿಕ ಅಮಿತ್ ಶಾಗೆ ಹುಚ್ಚು ಹಿಡಿದಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿ ಬಗ್ಗೆ ಮಾತಾಡಿದ ಲಾಲು ಪ್ರಸಾದ್,  ಪ್ರಸ್ತುತವಾಗಿ ಪ್ರತಿಪಕ್ಷಗಳ ಒಗ್ಗಟ್ಟಿನ ಅಗತ್ಯತೆ ದೇಶಕ್ಕಿದೆ ಎಂದು ಒತ್ತಿ ಹೇಳಿದರು. ಬಿಹಾರದಲ್ಲಿ ಬಿಜೆಪಿ ಸರಕಾರ ಹೋದ ಬಳಿಕ ಅಮಿತ್ ಶಾಗೆ ಸಂಪೂರ್ಣ ಹುಚ್ಚು ಹಿಡಿದಿದೆ. ಅದಕ್ಕಾಗಿಯೇ ಅವರು ಅಲ್ಲಿಗೆ ಓಡಿಹೋಗಿ ಜಂಗಲ್ ರಾಜ್ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಗುಜರಾತ್ ನಲ್ಲಿದ್ದಾಗ ಏನು ಮಾಡಿದರು ಎಂದು ಯಾದವ್ ಪ್ರಶ್ನಿಸಿದರು.

- Advertisement -

2024 ರಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸುತ್ತದೆ ಮತ್ತು ಮುಂದಿನ ವರ್ಷ ಬಿಹಾರದಲ್ಲಿ ಸರ್ಕಾರ ರಚಿಸುತ್ತದೆ ಎಂಬ ಗೃಹ ಸಚಿವರ ಹೇಳಿಕೆಗೆ ಸವಾಲು ಹಾಕಿದ  ಲಾಲು ಯಾದವ್, ನಾವು ಅದನ್ನು ನೋಡುತ್ತೇವೆ ಎಂದು ಹೇಳಿದರು.

ನಿತೀಶ್ ಕುಮಾರ್ ಮತ್ತು ಯಾದವ್ ಅವರು ಭಾನುವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದ್ದು, ಆ ಬಗ್ಗೆ ಮಾತಾಡಿದ ಅವರು, ನಾವು ಪ್ರತಿಪಕ್ಷಗಳ ಐಕ್ಯತೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

- Advertisement -