ಸರ್ಕಾರಿ ಶಾಲೆಯಲ್ಲಿ ಹೊಸ ವರ್ಷಕ್ಕೆ ಎಣ್ಣೆ ಪಾರ್ಟಿ: ದಾಖಲಾತಿಗಳು ಚೆಲ್ಲಾಪಿಲ್ಲಿ

Prasthutha|

ರಾಯಚೂರು: ಸರ್ಕಾರಿ ಶಾಲೆಯೊಂದರಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

- Advertisement -

ರಾತ್ರಿ ವೇಳೆ ಶಾಲೆಯ ಬೀಗ ಮುರಿದು, ಶಾಲೆಯ ವಸ್ತುಗಳು ಹಾಗೂ ದಾಖಲಾತಿಗಳನ್ನು ಚೆಲ್ಲಾಪಿಲ್ಲಿಯಾಗಿ ಯಾರೋ ಬಿಸಾಡಿರುವುದು ಕಂಡು ಬಂದಿದೆ. ಶಾಲೆಯಲ್ಲೇ ಮದ್ಯದ ಖಾಲಿ ಬಾಟಲಿ ಬಿದ್ದಿರುವುದರಿಂದ ಎಣ್ಣೆ ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶಾಲೆಯ ಮೊಟ್ಟೆ ಬೇಯಿಸಿಕೊಂಡು ತಿಂದು ಅಲ್ಲೇ ಬಿಸಾಡಿದ್ದಾರೆ. ಅಡುಗೆ ಕೋಣೆಯಲ್ಲಿ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆಗೆ ಬಳಸುವ ಎಣ್ಣೆ, ಇನ್ನಿತರೆ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆ. ಉಳಿದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Join Whatsapp