ಗಡ್ಕರಿಯಿಂದ ತೂಕ ಇಳಿಕೆ ಚಾಲೆಂಜ್: 15 ಕೆ.ಜಿ ತೂಕ ಇಳಿಸಿ 15,000 ಕೋಟಿ ಕೇಳಿದ ಸಂಸದ !

Prasthutha|

ಉಜ್ಜೈನಿ: 1 ಕೆ.ಜಿ ತೂಕ ಇಳಿಸಿಕೊಂಡರೆ 1000 ಕೋಟಿ ರೂ. ಅನುದಾನವನ್ನು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿಕೆ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದ ಉಜ್ಜಯಿನಿಯ ಲೋಕಸಭಾ ಸದಸ್ಯ ಅನಿಲ್ ಫಿರೋಜಿಯಾ ತಾವು 15 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

- Advertisement -

ನಿತೀನ್ ಗಡ್ಕರಿ ಅವರು ಫೆಬ್ರವರಿಯಲ್ಲಿ ಫಿರೋಜಿಯಾ ಅವರಿಗೆ ತೂಕ ಇಳಿಕೆ ಮಾಡಿಕೊಳ್ಳುವ ಚಾಲೆಂಜ್ ನೀಡಿದ್ದರು. 127 ಕೇಜಿ ತೂಕವುಳ್ಳ ಫಿರೋಜಿಯಾ ಅವರಿಗೆ ತೂಕವನ್ನು ಇಳಿಸಿಕೊಳ್ಳಲು ಪ್ರೇರಣೆ ನೀಡುವುದಕ್ಕಾಗಿ ಪ್ರತಿ ಕೆ.ಜಿ ತೂಕ ಇಳಿಸಿಕೊಂಡಿದ್ದರ ಬದಲು ಅವರ ಕ್ಷೇತ್ರಕ್ಕೆ 1000 ಕೋಟಿ ರೂ. ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ಈ ಸವಾಲಿನಂತೆ ಕಳೆದ 4 ತಿಂಗಳಲ್ಲಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ. ಹೀಗಾಗಿ ಮಾತಿನಂತೆ ಸಚಿವರು ಕ್ಷೇತ್ರಕ್ಕೆ 15000 ಕೋಟಿ ರೂ. ಕಾಮಗಾರಿಗಾಗಿ ಅನುದಾನ ಮಂಜೂರು ಮಾಡಬೇಕೆಂದು ಕೋರುತ್ತೇನೆ ಎಂದು ಫಿರೋಜಿಯಾ ಟ್ವೀಟ್ ಮಾಡಿದ್ದಾರೆ.

Join Whatsapp