ಬ್ರ್ಯಾಂಡ್ ಮಂಗಳೂರಿಗೆ ಮಸಿ ಬಳಿಯಬೇಡಿ: ಮಂಜುನಾಥ್ ಭಂಡಾರಿ

Prasthutha|

ಮಂಗಳೂರು: ಬೋಳಿಯಾರ್ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಘಟನೆ ನಡೆದರೆ ಬ್ರ್ಯಾಂಡ್ ಮಂಗಳೂರಿಗೆ ಹಾನಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

- Advertisement -


ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೋಳಿಯಾರ್ ಘಟನೆ ಪೂರ್ವನಿಯೋಜಿತವಾಗಿದೆ. ಗಲಾಟೆ ಮಾಡಿಸಿ ಸಮಾಜದ ಶಾಂತಿ ಕದಡುವಂತೆ ಮಾಡುವುದು ಬಿಜೆಪಿಯವರ ರೋಗ. ವಿಜಯೋತ್ಸವ ಮಾಡಲು ನಿಯಮದಡಿ ಅನುಮತಿ ಪಡೆದುಕೊಳ್ಳಬೇಕು.ವಿಜಯೋತ್ಸವವನ್ನು ಪಕ್ಷಗಳ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಡಲಿ.ಧಾರ್ಮಿಕ ಸ್ಥಳಗಳ ಮುಂದೆ ಪ್ರಚೋದನಕಾರಿ ಘೋಷಣೆ ಕೂಗುವುದು ಪ್ರಚೋದನೆಯಾಗಿದೆ.ರಾಜ್ಯಮಟ್ಟದ ಬಿಜೆಪಿ ನಾಯಕರು ದಕ್ಷಿಣ ಕನ್ನಡಕ್ಕೆ ಬಂದು ಮತ್ತಷ್ಟು ಪ್ರಚೋದನೆ ಮಾಡುತ್ತಿದ್ದಾರೆ. ಜಿಲ್ಲೆ ಶಾಂತಿಯುವಾಗಿ ಇರುವುದು ಬಿಜೆಪಿಯವರಿಗೆ ಬೇಕಾಗಿಲ್ಲ. ಈ ರೀತಿ ಘಟನೆ ನಡೆದರೆ ಬ್ರ್ಯಾಂಡ್ ಮಂಗಳೂರಿಗೆ ಹಾನಿ ಎಂದು ಹೇಳಿದ್ದಾರೆ.


ಮಂಗಳೂರನ್ನು ಕಪ್ಪುಚುಕ್ಕೆಯಾಗಿ ತೋರಿಸಬೇಡಿ, ಬ್ರ್ಯಾಂಡ್ ಮಂಗಳೂರಿಗೆ ಮಸಿ ಬಳಿಯಬೇಡಿ ಎಂದು ಮನವಿ ಮಾಡಿದ್ದಾರೆ.

- Advertisement -


ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಕ್ಕೆ ಕೇಸ್ ದಾಖಲಿಸಲಾಗಿದೆ ಎಂದು ಬಿಜೆಪಿಯ ಶಾಸಕ ಅಪಪ್ರಚಾರ ಮಾಡಿದ್ದಾರೆ. ಮಂಗಳೂರಲ್ಲಿ ಐಟಿ ಬಿಟಿ ಮತ್ತು ಸರ್ಫಿಂಗ್ ಅಭಿವೃದ್ಧಿ ಮಾಡಲು ಕಾಂಗ್ರೆಸ್ ಸರ್ಕಾರ ಪ್ರಯತ್ನ ಮಾಡುವಾಗ ಬಿಜೆಪಿಯವರಿಂದ ಅಡ್ಡಿ ಮಾಡುತ್ತಿದೆ ಎಂದು ಹೇಳಿದ್ದಾರೆ.


ಸ್ಪೀಕರ್ ಯು.ಟಿ ಖಾದರ್ ಅತ್ಯುತ್ತಮ ಜಾತ್ಯತೀತ ನಾಯಕ, ಅಂಥವರ ಮೇಲೂ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅಹಿತಕ ಘಟನೆಗಳಿಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲೆಯ ಪ್ರಮುಖರನ್ನು ಕರೆದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಂತಿಸಭೆ ನಡೆಸುತ್ತೇವೆ. ಆ ಶಾಂತಿ ಸಭೆಗೆ ಅಶಾಂತಿ ಸೃಷ್ಟಿಸುವವರನ್ನು ಕರೆಯಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಿದ್ದು ಕಾಂಗ್ರೆಸ್ ಪಕ್ಷ ಅಲ್ಲ. ಕಾಂಗ್ರೆಸ್ ಸರ್ಕಾರ 90 ದಿನಗಳ ಕಾಲ ಯಡಿಯೂರಪ್ಪ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಅದಕ್ಕಾಗಿ ಅವರು ಸರ್ಕಾರಕ್ಕೆ ಧನ್ಯವಾದ ಹೇಳಬೇಕು. ಯಡಿಯೂರಪ್ಪ ವಿರುದ್ಧ ಆದೇಶ ಕೊಟ್ಟಿರುವುದು ನ್ಯಾಯಾಲಯ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಕೇಸ್ ಮಾಡಿದ್ದಕ್ಕೆ ಕಾಂಗ್ರೆಸ್ ಪ್ರತೀಕಾರವಾಗಿ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಿಲ್ಲ ಎಂದರು.

Join Whatsapp