ಎಂಎಲ್’ಸಿ ಬಲ್ಕಿಸ್ ಬಾನು ಅವರಿಗೆ ಎಸ್’ಡಿಪಿಐ ಅಭಿನಂದನೆ

Prasthutha|

ವಿಧಾನಸಭೆಯಿಂದ ವಿಧಾನ ಪರಿಷತ್’ಗೆ ನೂತನವಾಗಿ ಆಯ್ಕೆಯಾದ ಬಲ್ಕಿಸ್ ಬಾನು ಅವರಿಗೆ ತಾಲೂಕು ಎಸ್’ಡಿಪಿಐ ಭದ್ರಾವತಿ ತಾಲ್ಲೂಕು ಸಮಿತಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -


ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಗೂ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರು ಆದ ಬಲ್ಕೀಸ್ ಬಾನು ಅವರನ್ನು ತಾಲೂಕು ಸಮಿತಿ ಸದಸ್ಯರು ಭೇಟಿಯಾಗಿ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.


ತಾಲೂಕಿನ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ಇದೇ ಸಂದರ್ಭದಲ್ಲಿ ಸದಸ್ಯರು ಕೋರಿದರು.

- Advertisement -


ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷರಾದ ದೇವೇಂದ್ರ ಪಾಟೀಲ್, ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ಪ್ರಧಾನ ಕಾರ್ಯದರ್ಶಿಯಾದ ಮೊಮ್ಮದ್ ರಾಝಿಕ್, ಸಾದಿಕ್, ಮತೀನ್, ಇಸ್ಮಾಯಿಲ್, ರಹ್ಮತುಲ್ಲಾಹ್, ಇರ್ಫಾನ್, ನವಾಜ್ ಮತ್ತು ಸಕ್ಲೈನ್ ಇದ್ದರು.

Join Whatsapp