ಭಾರತ ಮತ್ತು ಕೆನಡಾ ನಡುವಿನ ಐಸಿಸಿ ಟಿ20 ವಿಶ್ವಕಪ್‌ನ ಲೀಗ್ ಪಂದ್ಯ ರದ್ದು

Prasthutha|

ಲೌಡೆರ್‌ಹಿಲ್: ಬ್ರೋವರ್ಡ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಕೆನಡಾ ನಡುವಿನ ಐಸಿಸಿ ಟಿ20 ವಿಶ್ವಕಪ್‌ನ ಲೀಗ್ ಪಂದ್ಯ ರದ್ದಾಗಿದೆ. ಮಳೆ ಬಿಡುವು ನೀಡಿದ್ದರೂ ಒದ್ದೆ ಮೈದಾನದಿಂದಾಗಿ ಟಾಸ್ ಕೂಡ ಕಾಣದೆ ರದ್ದುಗೊಂಡಿದೆ. ಇದರೊಂದಿಗೆ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. ಜತೆಗೆ ರೋಹಿತ್ ಶರ್ಮ ಪಡೆ ಎ ಗುಂಪಿನ ಅಗ್ರಸ್ಥಾನವನ್ನು ಕಾಯ್ದು, ಅಜೇಯವಾಗಿ ಸೂಪರ್-8 ಹಂತಕ್ಕೇರಿದೆ.

- Advertisement -

ಶುಕ್ರವಾರ ಅಮೆರಿಕ-ಐರ್ಲೆಂಡ್ ನಡುವಿನ ಪಂದ್ಯ ರದ್ದುಗೊಂಡ ಬಳಿಕ ಸುರಿದ ಭಾರಿ ಮಳೆಯಿಂದಾಗಿ ಮೈದಾನ ಸಂಪೂರ್ಣವಾಗಿ ತೇವಗೊಂಡಿತ್ತು. ಇಂಡೋ-ಕೆನಡಾ ಪಂದ್ಯಕ್ಕೆ ಮೈದಾನ ಸಜ್ಜುಗೊಳಿಸಲು ಸಿಬ್ಬಂದಿ ಹರಸಾಹಸಪಟ್ಟರೂ, ಪ್ರಯತ್ನ ಲಿಸಲಿಲ್ಲ. ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ 2ನೇ ಬಾರಿ ಮೈದಾನದ ಔಟ್‌ಫೀಲ್ಡ್ ಪರೀಕ್ಷಿಸಿದ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.

Join Whatsapp