ನೇಪಾಳ ಪ್ರಧಾನಿಯ ಪತ್ನಿ ಹೃದಯಾಘಾತದಿಂದ ನಿಧನ

Prasthutha|

ಕಾಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರ ಪತ್ನಿ ಸೀತಾ ದಹಾಲ್ (69) ಹೃದಯಾಘಾತದಿಂದ ನಿಧನರಾಗಿದ್ದಾರೆ.

- Advertisement -


ವರದಿಗಳ ಪ್ರಕಾರ, ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಸೀತಾ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಕಠ್ಮಂಡುವಿನಲ್ಲಿ ನಾರ್ವಿಕ್ ಇಂಟರ್ನ್ಯಾಷನಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯ ಮೂಲಗಳು ತಿಳಿಸಿವೆ.