ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಿದ್ದರಾಮಯ್ಯ, ಶಿವಕುಮಾರ್ ಹೆಸರನ್ನು ಎಳೆದು ತರುವುದು ಸರಿಯಲ್ಲ: ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಪದೇ ಪದೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಎಳೆದು ತರಲಾಗುತ್ತಿರುವುದು ಸರಿಯಲ್ಲ. ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

- Advertisement -

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಹೊಳೆನರಸೀಪುರಕ್ಕೆ ಸಂಬಂಧಿಸಿದ ವಿಚಾರ. ಕಾರ್ತಿಕ್, ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ಅವರ ನಡುವೆ ನಡೆದ ಜಗಳದಿಂದ ಆಚೆ ಬಂದ ವಿಚಾರ. ಇಂತಹ ಸಂಧರ್ಭದಲ್ಲಿ ರೇವಣ್ಣ, ಕುಮಾರಸ್ವಾಮಿ ಅವರು ಪ್ರಜ್ವಲ್ ಗೆ ಬಂಧನಕ್ಕೆ ಒಳಗಾಗು ಎಂದು ಕಿವಿ ಮಾತು ಹೇಳಬೇಕಾಗಿತ್ತು. ಅದು ಮಾಡದೇ ಈಗ ವಿಷಯ ಡೈವರ್ಟ್ ಮಾಡುತ್ತಿದ್ದಾರೆ ಎಂದರು.

ದೇವರಾಜೇಗೌಡರು ಅನೇಕ ದಿನಗಳಿಂದ ವಿಡಿಯೋ ವಿಚಾರದಲ್ಲಿ ಆರೋಪ ಮಾಡುತ್ತಲೇ ಬಂದಿದ್ದರು. ಎಸ್ ಐಟಿಯನ್ನು ಸ್ವಾಗತ ಸಹ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಎಳೆದು ತಂದಿದ್ದಾರೆ. ಇದ್ಯಾಕೆಂದು ಗೊತ್ತಿಲ್ಲ ಎಂದು ಹೇಳಿದರು.

- Advertisement -

ಅಶೋಕ್ ಅವರು ಪದೇ ಪದೇ ಸಮುದಾಯವನ್ನು ಎಳೆದು ತರುತ್ತಿರುವುದು ಸೂಕ್ತವಲ್ಲ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆಯನ್ನು ಅವರು ಏಕೆ ಮಾಡುತ್ತಾರೆ. ದೇಶದ ಪ್ರಧಾನಿಗಳು ಇದನ್ನು ತಿರುಚಿರುವ ವಿಡಿಯೋ ಎಂದು ಹೇಳಿಕೆಯನ್ನು ಏಕೆ ನೀಡಿದರು ಎಂಬುದೇ ಗೊತ್ತಿಲ್ಲ. ತನಿಖೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಅವರದ್ದು ತಪ್ಪಿಲ್ಲ ಎಂದರೆ ಆಚೆ ಬರುತ್ತಾನೆ ಎಂದರು.

Join Whatsapp