‘ಟ್ರೋಲ್’ಗಳಿಗೆ ಗಡಿಬಿಡಿ ಮಾಡ್ಬೇಡಿ’ : ಸದನದಲ್ಲಿ ಪ್ರದೀಪ್ ಈಶ್ವರ್ ಗೆ ಧೈರ್ಯ ತುಂಬಿದ ಸ್ಪೀಕರ್ ಖಾದರ್

Prasthutha|

ಬೆಂಗಳೂರು: ಟ್ರೋಲ್ ಮಾಡುವವರು ಮಾಡಲಿ, ನೀವು ಧೈರ್ಯದಿಂದ ಮಾತನಾಡಿ ಎಂದು ಸದನದಲ್ಲಿ ಶಾಸಕ ಪ್ರದೀಪ್ ಈಶ್ವರ್ ಗೆ ಸ್ಪೀಕರ್ ಯು.ಟಿ ಖಾದರ್ ಕಿವಿಮಾತು ಹೇಳಿದ್ದಾರೆ.

- Advertisement -


ವಿಧಾನಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡುವ ವೇಳೆ ಧೈರ್ಯ ತುಂಬಿದ ಸ್ಪೀಕರ್ ಖಾದರ್, ಹೆಚ್ಚು ಕಮ್ಮಿ ಆದ್ರೆ ತೊಂದ್ರೆ ಇಲ್ಲ, ಇದೇನ್ ಪರೀಕ್ಷೆ, ಕೋರ್ಟ್ ಅಲ್ಲ. ನಾನು ಸ್ಪೀಕರ್ ಹುದ್ದೆಗೇರಲು ಟ್ರೋಲ್ ಮಾಡಿದವರೇ ಕಾರಣ ಎಂದರು.


ಬಳಿಕ ಮಾತನಾಡಿದ ಪ್ರದೀಪ್ ಈಶ್ವರ್ , ಬಡವರ ದೇವಾಲಯ ಕನ್ನಡ ಶಾಲೆ. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ ಎನ್ನುವ ಹಾಗೆ ಬಡವರ ಮಕ್ಕಳು ವಿಧಾನಸೌಧಕ್ಕೆ ಬರಲು ಸಾಧ್ಯವಾಗಿರುವುದು ಸಂವಿಧಾನದಿಂದ. ನಮ್ಮ ಪಕ್ಷದ ನಾಯಕರು ನನ್ನಂತ ಬಡವರ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ ಎಂದರು.

- Advertisement -


ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಲ್ಲಿ ರೇಷನ್ ಅಷ್ಟೇ. ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ಎನ್ನುವುದು ದೇವರು. ಗೃಹಜ್ಯೋತಿ ಕೇವಲ ಮನೆಯನ್ನು ಬೆಳಗುತ್ತಿಲ್ಲ. ಕೋಟ್ಯಂತರ ಮಕ್ಕಳು ತಡರಾತ್ರಿಯವರೆಗೆ ಓದಲು ಸಹಾಯಕವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಆದ್ಯತೆ ನೀಡಬೇಕಿದೆ. ಅದರ ಬಗ್ಗೆ ಸಂಬಂಧಿಸಿದ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.