ಮರಣ ಪ್ರಮಾಣ ಪತ್ರದಲ್ಲಿ ಮುಸ್ಲಿಂ, ಸರ್ಕಾರಿ ದಾಖಲೆಗಳಲ್ಲಿ ಹಿಂದೂ : ಡ್ರಗ್ಸ್ ಪ್ರಕರಣದ ಅಧಿಕಾರಿ ಸಮೀರ್ ವಾಂಖೆಡೆ ಕುಟುಂಬ ಕರ್ಮಕಾಂಡ !

Prasthutha|

ಶಾರುಖ್ ಖಾನ್ ಪುತ್ರನನ್ನು ಬಂಧಿಸಿದ್ದ ಅಧಿಕಾರಿಯ ದಾಖಲೆ ಬಿಡುಗಡೆ

- Advertisement -

ಪುಣೆ: ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖಾಧಿಯಾಗಿದ್ದ ಎನ್.ಸಿ.ಬಿ. ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಯ ಕುಟುಂಬದ ಕರ್ಮಕಾಂಡವನ್ನು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಬಯಲಿಗೆಳೆದಿದ್ದು, ವಾಂಖೆಡೆಯ ತಾಯಿಯ ಮರಣ ಪ್ರಮಾಣ ಪತ್ರ ನಕಲಿ ಎಂದು ಆರೋಪಿಸಿದ್ದಾರೆ.

ಮಾತ್ರವಲ್ಲ ಸಮೀರ್ ವಾಂಖೆಡೆ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಟ್ವೀಟ್ ನಲ್ಲಿ ಲಗತ್ತಿಸಿದ್ದಾರೆ.

- Advertisement -

ಈ ಕುರಿತು ಮಲಿಕ್ ಅವರು ಟ್ವೀಟ್ ನಲ್ಲಿ ಪ್ರತಿಕ್ರಿಯಿಸುತ್ತಾ, ಸಮೀರ್ ತಾಯಿ ಝುಬೇದಾ ಬಾನು ಎಂಬವರ ಮರಣ ಪ್ರಮಾಣಪತ್ರದಲ್ಲಿ ಆಕೆಯ ಧರ್ಮ ಹಿಂದೂ ಎಂದು ಉಲ್ಲೇಖಿಸಲಾಗಿದೆ. ಆದರೆ ಮತ್ತೊಂದು ದಾಖಲೆಯನ್ನು ತೋರಿಸಿದ ನವಾಬ್ ಮಲಿಕ್, ಆಕೆಯ ಧರ್ಮ ಮುಸ್ಲಿಮ್ ಎಂದು ಕಬರ್ ಸ್ಥಾನದ ಗೋರಿಯ ಮೇಲೆ ಉಲ್ಲೇಖಿಸಲಾಗಿದೆ. ಸಮೀರ್ ವಾಂಖೆಡೆಯ ತಾಯಿಯ ಮರಣ ಪ್ರಮಾಣಪತ್ರದಲ್ಲಿ ನಕಲಿಯನ್ನು ಪ್ರದರ್ಶಿಸಿದ್ದಾರೆ. ಅಂತಿಮ ಸಂಸ್ಕಾರದ ವೇಳೆ ಮುಸ್ಲಿಮ್ ಮತ್ತು ಸರ್ಕಾರಿ ದಾಖಲೆಯಲ್ಲಿ ಹಿಂದೂ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಮೀರ್ ವಾಂಖೆಡೆ ಹುಟ್ಟುನಿಂದ ಮುಸ್ಲಿಮ್ ಆಗಿದ್ದು, ಆತನ ತಂದೆಯ ಹಿಂದಿನ ಗುರುತನ್ನು ಬಳಸಿಕೊಂಡು ಪರಿಶಿಷ್ಟ ಜಾತಿ (ಎಸ್.ಸಿ) ಅಡಿಯಲ್ಲಿ ಸರ್ಕಾರಿ ಉದ್ಯೋಗ ಪಡೆಯುವಂತಾಗಲು ನಕಲಿ ಮಾಡಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ. ಮಾತ್ರವಲ್ಲ ವಾಂಖೆಡೆಯ ತಾಯಿ ಝುಬೇದಾ ಬಾನು ಅವರನ್ನು ಮದುವೆ ಆಗುವ ಮೊದಲು ತಂದೆ ಜ್ಞಾನದೇವ್ ವಾಂಖೆಡೆ ಅವರು ಮುಸ್ಲಿಮ್ ಆಗಿ ಮತಾಂತರಗೊಂಡಿದ್ದರು ಎಂದು ಹೇಳಿದ್ದಾರೆ.

ಕ್ರೂಸ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಬಂಧನದ ನಂತರ ಮಹಾರಾಷ್ಟ್ರ ಸಚಿವರು ಸಮೀರ್ ವಾಂಖೆಡೆ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಮಲಿಕ್ ಈ ಹಿಂದೆ ಆರೋಪಿಸಿದ್ದರು.

Join Whatsapp