ಮುಸ್ಲಿಂ ವೃದ್ಧನಿಗೆ ಥಳಿತ ಪ್ರಕರಣ | ಬಂಧಿತ ಎಸ್ಪಿ ನಾಯಕ ಉಮ್ಮೀದ್‌ ಪೆಹಲ್ವಾನ್‌ ಗೆ 14 ದಿನಗಳ ನ್ಯಾಯಾಂಗ ಬಂಧನ

Prasthutha|

ನವದೆಹಲಿ : ಉತ್ತರ ಪ್ರದೇಶದ ಲೋನಿಯಲ್ಲಿ ಮುಸ್ಲಿಂ ವೃದ್ಧನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದ ಆರೋಪದಲ್ಲಿ ಬಂಧಿತರಾಗಿರುವ ಸಮಾಜವಾದಿ ಪಕ್ಷದ ಮುಖಂಡ ಉಮ್ಮೀದ್‌ ಪೆಹಲ್ವಾನ್‌ ಇದ್ರಿಸಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶನಿವಾರ ದೆಹಲಿಯಲ್ಲಿ ಬಂಧಿಸಲ್ಪಟ್ಟಿದ್ದ ಅವರನ್ನು ಭಾನುವಾರ ಗಾಝಿಯಾಬಾದ್‌ ಕೋರ್ಟ್‌ ನಲ್ಲಿ ಹಾಜರು ಪಡಿಸಲಾಗಿದೆ.

- Advertisement -

ಮುಸ್ಲಿಂ ವೃದ್ಧರೊಬ್ಬರಿಗೆ ಗುಂಪೊಂದು ಥಳಿಸಿತ್ತು, ಈ ವೇಳೆ ʼಜೈ ಶ್ರೀರಾಮ್‌ʼ ಹೇಳುವಂತೆ ಒತ್ತಾಯಿಸಲಾಗಿತ್ತು ಎಂಬ ವೀಡಿಯೊವೊಂದು ವೈರಲ್‌ ಆಗಿತ್ತು. ಈ ಬಗ್ಗೆ ಸುದ್ದಿ ಮಾಡಿರುವ ಪತ್ರಕರ್ತರು, ವೀಡಿಯೊವನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿರುವವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಕೋಮುಬಣ್ಣ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ಪೊಲೀಸರು ದೂರುದಾರರು ನೀಡಿರುವ ಅಂಶಗಳನ್ನು ಪರಿಗಣಿಸಿಲ್ಲ ಎಂಬ ಆರೋಪಗಳೂ ಇವೆ. ಟ್ವಿಟರ್‌ ಇಂಡಿಯಾ, ದ ವೈರ್‌ ಸುದ್ದಿ ಸಂಸ್ಥೆ ಸೇರಿದಂತೆ ಪತ್ರಕರ್ತರು, ಪ್ರಮುಖರ ವಿರುದ್ಧ ದೂರು ದಾಖಲಿಸಿಕೊಂಡ ಮರು ದಿನ ಎಸ್ಪಿ ಮುಖಂಡ ಉಮ್ಮೀದ್‌ ಪೆಹಲ್ವಾನ್‌ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಶನಿವಾರ ದೆಹಲಿಯಲ್ಲಿ ಉಮ್ಮೀದ್‌ ಪೆಹಲ್ವಾನ್‌ ಮತ್ತು ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.  

Join Whatsapp