ವಿವಿಧ ಮಹಾನಗರ ಪಾಲಿಕೆ, ನಗರಸಭೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ

Prasthutha|

ಬೆಂಗಳೂರು : ರಾಜ್ಯದ 10 ಮಹಾನಗರ ಪಾಲಿಕೆ, ನಗರಸಭೆಗಳ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಸರಕಾರದಿಂದ ಈ ಕುರಿತ ಅಧಿಕೃತ ಆದೇಶ ಹೊರಬಿದ್ದಿದೆ.

- Advertisement -

ಮಹಾನಗರ ಪಾಲಿಕೆ, ನಗರಸಭೆಗಳ ಮೇಯರ್, ಉಪ ಮೇಯರ್ ಮೀಸಲಾತಿ ನಿಗದಿಗೆ ಸಂಬಂಧಿಸಿ ಸರಕಾರ ಜ.21ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಿತ್ತು.

ವಿವಿಧ ಮಹಾನಗರ ಪಾಲಿಕೆ, ನಗರಸಭೆಗಳ ಮೇಯರ್, ಉಪ ಮೇಯರ್ ಮೀಸಲಾತಿ ಈ ಕೆಳಗಿನಂತಿವೆ.

- Advertisement -

ಬಳ್ಳಾರಿ : ಮೇಯರ್ –ಸಾಮಾನ್ಯ ವರ್ಗ, ಉಪ ಮೇಯರ್ – ಹಿಂದುಳಿದ ವರ್ಗ ಮಹಿಳೆ

ಬೆಳಗಾವಿ : ಮೇಯರ್ – ಸಾಮಾನ್ಯ ವರ್ಗ, ಉಪ ಮೇಯರ್ – ಸಾಮಾನ್ಯ ವರ್ಗ ಮಹಿಳೆ

ದಾವಣಗೆರೆ : ಮೇಯರ್ – ಪರಿಶಿಷ್ಟ ಜಾತಿ ಮಹಿಳೆ, ಉಪ ಮೇಯರ್-ಸಾಮಾನ್ಯ ವರ್ಗ ಮಹಿಳೆ

ಹುಬ್ಬಳ್ಳಿ-ಧಾರವಾಡ : ಮೇಯರ್ – ಹಿಂದುಳಿದ ವರ್ಗ-ಎ, ಉಪ ಮೇಯರ್-ಪರಿಶಿಷ್ಟ ಜಾತಿ ಮಹಿಳೆ

ಕಲಬುರಗಿ : ಮೇಯರ್ – ಸಾಮಾನ್ಯ ವರ್ಗ ಮಹಿಳೆ, ಉಪ ಮೇಯರ್  ಹಿಂದುಳಿದ ವರ್ಗ-ಬಿ

ಮಂಗಳೂರು :  ಮೇಯರ್ – ಸಾಮಾನ್ಯ ವರ್ಗ, ಉಪ ಮೇಯರ್ – ಹಿಂದುಳಿದ ವರ್ಗ-ಎ ಮಹಿಳೆ

ಮೈಸೂರು : ಮೇಯರ್- ಸಾಮಾನ್ಯ ವರ್ಗ ಮಹಿಳೆ, ಉಪ ಮೇಯರ್-ಸಾಮಾನ್ಯ

ಶಿವಮೊಗ್ಗ : ಮೇಯರ್ ಹಿಂದುಳಿದ ವರ್ಗ-ಎ ಮಹಿಳೆ, ಉಪ ಮೇಯರ್-ಸಾಮಾನ್ಯ ವರ್ಗ 

ತುಮಕೂರು : ಮೇಯರ್- ಪರಿಶಿಷ್ಟ ಜಾತಿ, ಉಪ ಮೇಯರ್- ಸಾಮಾನ್ಯ ವರ್ಗ ಮಹಿಳೆ

ವಿಜಯಪುರ : ಮೇಯರ್-ಸಾಮಾನ್ಯ ವರ್ಗ, ಉಪ ಮೇಯರ್- ಹಿಂದುಳಿದ ವರ್ಗ-ಎ ಮೀಸಲು

Join Whatsapp