ಸ್ಟಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಹಿಂದೂ ದೇವರ ಬಗ್ಗೆ ಅವಮಾನ ಮಾಡಿದ್ದಕ್ಕೆ ಸಾಕ್ಷಿಯಿಲ್ಲ : ಪೊಲೀಸ್ ವರಿಷ್ಠಾಧಿಕಾರಿ

Prasthutha|

ಮುಂಬೈ : ಹಿಂದೂ ದೇವರಿಗೆ ಅವಮಾನ ಮಾಡಿದ್ದಾರೆ ಎಂಬ ಆಪಾದನೆಯಲ್ಲಿ ಇತ್ತೀಚೆಗೆ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಸೇರಿದಂತೆ ಐವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು. ಆದರೆ, ಅವರು ಹಿಂದೂ ದೇವರಿಗೆ ಅವಮಾನ ಮಾಡಲಾದ ಬಗ್ಗೆ ವೀಡಿಯೊ ಅಥವಾ ಯಾವುದೇ ಸಾಕ್ಷಿಗಳಿಲ್ಲ. ಸಾಕ್ಷಿಯಿಲ್ಲದಿದ್ದರೂ ಪರವಾಗಿಲ್ಲ, ಮುಂದೆ ಸಾಕ್ಷಿ ಸೃಷ್ಟಿಸಬಹುದು ಎಂಬರ್ಥದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ ಎಂದು ವರದಿಯಾಗಿದೆ.

- Advertisement -

ಯಾವುದೇ ಸಾಕ್ಷಿಗಳಿಲ್ಲದಿದ್ದರೂ, ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ನೀಡಿದ ದೂರಿನ ಆಧಾರದಲ್ಲಿ ಬಂಧಿತರಾಗಿರುವ ಬಂಧಿತರು ಎರಡು ವಾರಗಳಿಂದ ಜಾಮೀನು ನಿರಾಕರಿಸಲ್ಪಟ್ಟು, ಜೈಲಿನಲ್ಲಿದ್ದಾರೆ ಎಂದು ‘ಆರ್ಟಿಕಲ್14’ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಧ್ಯಪ್ರದೇಶದ ಇಂದೋರ್ ಪೊಲೀಸರು ಎರಡು ವಾರಗಳ ಹಿಂದೆ, ಮುನಾವರ್ ಫಾರೂಕಿ ಸೇರಿದಂತೆ ಐವರು ಸ್ಟಾಂಡ್ ಅಪ್ ಕಾಮಿಡಿಯನ್ ಗಳನ್ನು ಬಂಧಿಸಿತ್ತು. ಹಿಂದೂ ದೇವರಿಗೆ ಅವರು ಅವಮಾನಿಸಿದ್ದಾರೆ ಎಂದು ಸ್ಥಳೀಯ ಕೆಲವು ಹಿಂದುತ್ವ ಸಂಘಟನೆಗಳ ಸದಸ್ಯರು ಆಪಾದಿಸಿದ್ದರು.

- Advertisement -

ದೂರುದಾರ ನೀಡಿರುವ ಮೌಖಿಕ ಸಾಕ್ಷಿಯ ಹೊರತಾಗಿ ಇತರ ಯಾವುದೇ ಸಾಕ್ಷಿ ಮುನಾವರ್ ಫಾರೂಕಿ ಮತ್ತಿತರರ ಮೇಲಿಲ್ಲ. ಫಾರೂಕಿ ಕಾರ್ಯಕ್ರಮ ಆರಂಭಿಸುವುದಕ್ಕೆ ಮುನ್ನವೇ ಅಲ್ಲಿ ಗದ್ದಲ ಏರ್ಪಟ್ಟಿತ್ತು. ಆದರೆ, ಕಾರ್ಯಕ್ರಮ ಆರಂಭಕ್ಕೂ ಮುನ್ನ ನಡೆಸಲಾಗುತ್ತಿದ್ದ ಪೂರ್ವಾಭ್ಯಾಸದ ವೇಳೆ, ಅವರು ಶಿವ ಮತ್ತು ರಾಮನ ಕುರಿತು ಜೋಕ್ ಗಳನ್ನು ಹರಿಸಲಿದ್ದಾರೆ ಎಂಬುದನ್ನು ಕೆಲವರು ಕೇಳಿಸಿಕೊಂಡಿದ್ದರು ಎಂದು ನಮಗೆ ತಿಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಖತ್ರಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Join Whatsapp