January 14, 2021

ಕೇವಲ 37 ಬಾಲ್ ಗೆ ಶತಕ ಬಾರಿಸಿದ ಕಾಸರಗೋಡಿನ ಮೊಹಮ್ಮದ್ ಅಝರುದ್ದೀನ್

ಮಂಗಳೂರು : ‘ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ’ ಕ್ರಿಕೆಟ್ ಕೂಟದಲ್ಲಿ ಕಾಸರಗೋಡು ಮೂಲದ ಮುಹಮ್ಮದ್ ಅಝರುದ್ದೀನ್ ಕೇವಲ 37 ಬಾಲ್ ಗಳಲ್ಲಿ ಶತಕ ಬಾರಿಸುವ ಮೂಲಕ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೀಡು ಮಾಡಿದ್ದಾರೆ. ಓಪನಿಂಗ್ ಬ್ಯಾಟ್ಸ್ ಮ್ಯಾನ್ ಅಝರುದ್ದೀನ್ ಈಗ ದೇಶದ ಎಲ್ಲಾ ಕ್ರಿಕೆಟಿಗರ ಗಮನ ಸೆಳೆದು ಬಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಸ್ಕ್ವಾಡ್ ವಿರುದ್ಧದ ಪಂದ್ಯದಲ್ಲಿ ಕೇರಳದ ಪರವಾಗಿ ಆಡಿದ ಅಝರುದ್ದೀನ್, ಭಾರತೀಯ ಬ್ಯಾಟ್ಸ್ ಮ್ಯಾನ್ ಗಳಲ್ಲಿ 20 ಓವರ್ ಗಳ ಪಂದ್ಯಗಳಲ್ಲಿ ಮೂರನೇ ಅತಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

37 ಬಾಲ್ ಗಳಲ್ಲಿ 100 ರನ್ ಗಳಿಸಿರುವ ಅಝರುದ್ದೀನ್, 11 ಸಿಕ್ಸ್ ಗಳನ್ನು ಬಾರಿಸಿದ್ದಾರೆ.

ಕಾಸರಗೋಡಿನ ಥಲಂಗಾರದಲ್ಲಿ 1994ರಲ್ಲಿ ಜನಿಸಿರುವ ಅಝರುದ್ದೀನ್ ರನ್ನು ಬೇರೆ ಹೆಸರುಗಳಿಂದಲೂ ಕರೆಯಲಾಗುತ್ತದೆ. ಆದರೆ, ಅವರ ಸಹೋದರ ಕಮರುದ್ದೀನ್ ಅವರಿಗೆ ತಮ್ಮ ನೆಚ್ಚಿನ ಕ್ರಿಕೆಟಿಗ ಮೊಹಮ್ಮದ್ ಅಝರುದ್ದೀನ್ ಹೆಸರನ್ನು ನಾಮಕರಣ ಮಾಡಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ