ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮುಹಮ್ಮದ್ ಹಫೀಝ್‌

Prasthutha|

- Advertisement -

ಹೊಸದಿಲ್ಲಿ: ಪಾಕಿಸ್ತಾನ ತಂಡದ ಮಾಜಿ ನಾಯಕ ಮತ್ತು ಆಲ್‌ರೌಂಡರ್‌ ಮುಹಮ್ಮದ್ ಹಫೀಝ್‌
ತಮ್ಮ 18 ವರ್ಷಗಳ ಸುದೀರ್ಘಾವಧಿಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿಗೆ ತೆರೆ ಎಳೆದಿದ್ದಾರೆ. 2003ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕು ಆರಂಭಿಸಿದ್ದ ಹಫೀಝ್‌, ಕಳೆದ ವರ್ಷ ಯುಎಇ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ಸ್‌ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 55 ಪಂದ್ಯಗಳನ್ನಾಡಿ ನಿವೃತ್ತಿ ಘೋಷಿಸಿದ್ದ ಹಫೀಝ್‌, ಬಳಿಕ ಏಕದಿನ ಕ್ರಿಕೆಟ್‌ ಮತ್ತು ಟಿ20 ಕ್ರಿಕೆಟ್‌ ಮಾದರಿಯಲ್ಲಿ ಮಾತ್ರವೇ ಪಾಕಿಸ್ತಾನ ತಂಡದಲ್ಲಿ ತಮ್ಮ ಆಟ ಮುಂದುವರಿಸಿದ್ದರು. ಪಾಕ್‌ ಪರ 2018 ಒಡಿಐ ಮತ್ತು 119 ಟಿ20-ಐ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ ಮೂರೂ ಮಾದರಿಗಳಲ್ಲಿ 3652, 6614 ಮತ್ತು 2514 ರನ್‌ಗಳನ್ನು ಗಳಿಸಿದ್ದಾರೆ.

- Advertisement -

ಹೆಮ್ಮೆ ಮತ್ತು ತೃಪ್ತಿಯೊಂದಿಗೆ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ವಿದಾಯ ಹೇಳುತ್ತಿದ್ದೇನೆ. ಆರಂಭದಲ್ಲಿ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದ್ದನ್ನು ಸಾಧಿಸಿದ್ದೇನೆ. ಇದಕ್ಕೆ ನೆರವಾದ ನನ್ನ ಸಹ ಆಟಗಾರರು, ನಾಯಕರು, ಕೋಚ್‌ಗಳು, ಸಹಾಯಕ ಸಿಬ್ಬಂದಿ ಮತ್ತು ಕ್ರಿಕೆಟ್‌ ಮಂಡಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ,” ಎಂದು ಪಿಸಿಬಿ ಬಿಡುಗಡೆ ಮಾಡಿರುವ ಹಫೀಜ್‌ ಹೇಳಿಕೆಯಲ್ಲಿ ತಿಳಿಸಲಾಗಿದೆ.

Join Whatsapp