ಗಂಡನ ಬಿಟ್ಟಿದ್ದಾಳೆಂದು ಹೆಗಲಲ್ಲಿ ಬಾಲಕನ ಕೂರಿಸಿ ಮಹಿಳೆಯ ಮೆರವಣಿಗೆ ಮಾಡಿಸಿದ ದುಷ್ಕರ್ಮಿಗಳು

Prasthutha|

ಭೋಪಾಲ್ : ಪತಿಯನ್ನು ತೊರೆದಿದ್ದಾಳೆ ಎಂಬ ಆರೋಪದಲ್ಲಿ ಮಹಿಳೆಯೊಬ್ಬಳಿಗೆ, ಆಕೆಯ ಪತಿಯ ಸಂಬಂಧಿಕ ಬಾಲಕನೊಬ್ಬನನ್ನು ಹೊತ್ತುಕೊಂಡು ಹೋಗುವ ಅನಾಗರಿಕ ಶಿಕ್ಷೆ ನೀಡಿದ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯ ಸಿರ್ಸಿಯಲ್ಲಿ ನಡೆದಿದೆ.

- Advertisement -

ಗಂಡನ ಕುಟುಂಬದ ಬಾಲಕನೊಬ್ಬನನ್ನು ಹೆಗಲ ಮೇಲೆ ಹೊತ್ತುಕೊಂಡು ಮಹಿಳೆ ಮೂರು ಕಿ.ಮೀ. ದೂರ ನಡೆಯುವಂತೆ ಮಾಡಲಾಗಿದೆ. ಈ ಘಟನೆಯ ವೀಡಿಯೊ ಮಾಡಿ ಕೆಲವರು ವಿಕೃತ ಮೆರೆದಿದ್ದಾರೆ.

ಮಹಿಳೆ ತನ್ನ ಮೊದಲ ಪತಿಯನ್ನು ಬಿಟ್ಟು ಎರಡನೇ ಪತಿಯ ಜೊತೆ ವಾಸಿಸುತ್ತಿದ್ದಳು. ಮೊದಲ ಪತಿ ಮತ್ತು ಆತನ ಸಂಬಂಧಿಕರು ಮಹಿಳೆಯ ಎರಡನೇ ಪತಿಯ ಮನೆಗೆ ತೆರಳಿ ಆಕೆಯನ್ನು ಥಳಿಸಿದ್ದಾರೆ. ಬಳಿಕ ಆಕೆಯ ಹೆಗಲಲ್ಲಿ ಬಾಲಕನೊಬ್ಬನನ್ನು ಕೂರಿಸಿ 3 ಕಿ.ಮೀ. ಮೆರವಣಿಗೆ ನಡೆಸಿದ್ದಾರೆ.

- Advertisement -

ಆಕೆಯ ಸುತ್ತ ಕೆಲವು ದುಷ್ಕರ್ಮಿಗಳು ಕೋಲುಗಳು, ಮತ್ತು ಕ್ರಿಕೆಟ್ ಬ್ಯಾಟ್ ಗಳನ್ನು ಹಿಡಿದುಕೊಂಡು, ಆಕೆಯನ್ನು ಹಿಂಬಾಲಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಆಕೆಗಾಗುತ್ತಿರುವ ಅವಮಾನವನ್ನು ನೋಡಿ ಅವರೆಲ್ಲಾ ಆನಂದ ಪಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಮಹಿಳೆ ಮುಂದೆ ನಡೆಯಲು ಸಾಧ್ಯವಾಗದಿದ್ದಾಗ ಕೆಲವರು ಥಳಿಸಿರುವುದೂ ವೀಡಿಯೊದಲ್ಲಿ ಕಂಡು ಬಂದಿದೆ. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

Join Whatsapp