ಟೂಲ್ ಕಿಟ್‌ನಲ್ಲಿ ರಾಷ್ಟ್ರ ವಿರೋಧಿ ಅಂಶ ಏನೂ ಇಲ್ಲ: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ದೀಪಕ್ ಗುಪ್ತಾ

Prasthutha|

- Advertisement -

ಟೂಲ್ ಕಿಟ್‌ನಲ್ಲಿ ಕಾನೂನುಬಾಹಿರ ಅಥವಾ ರಾಷ್ಟ್ರ ವಿರೋಧಿಯಾದ ಅಂಶ ಏನೂ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ದೀಪಕ್ ಗುಪ್ತಾ ಹೇಳಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೂ ಸರಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಸರಕಾರವನ್ನು ಟೀಕಿಸುವುದು ದೇಶದ್ರೋಹವಲ್ಲ ಎಂದೂ ಅವರು ಹೇಳಿದ್ದಾರೆ. ದೀಪಕ್ ಗುಪ್ತಾ ಎನ್‌ಡಿಟಿವಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡುತ್ತಿದ್ದರು.

“ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಟೂಲ್ ಕಿಟ್‌ನಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಯಾವುದನ್ನೂ ನಾನು ಕಾಣಲಿಲ್ಲ. ಇದರಲ್ಲಿ ದೇಶದ್ರೋಹವೇನೂ ಇಲ್ಲ. ಪ್ರತಿಭಟನಾಕಾರರನ್ನು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಅದು ಬೇರೆ ವಿಷಯ”

- Advertisement -

– ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ದೀಪಕ್ ಗುಪ್ತಾ

ದೇಶದ್ರೋಹದ ಅಪರಾಧವು ವಸಾಹತುಶಾಹಿ ಕಾಲದಿಂದಲೇ ಇದೆ. ಆ ಸಮಯದಲ್ಲೇ ಇದು ಜೀವಾವಧಿ ಶಿಕ್ಷೆಯಿಂದ ಶಿಕ್ಷಿಸಬಹುದಾದ ಗಂಭೀರ ಅಪರಾಧವಾಗಿತ್ತು. ದುರದೃಷ್ಟವಶಾತ್ ಆ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಭಿನ್ನಮತವನ್ನು ಹತ್ತಿಕ್ಕಲು ಈ ಕಾನೂನನ್ನು ಬಳಸಲಾಗುತ್ತಿದೆ ಎಂದು ಮಾಜಿ ನ್ಯಾಯಾಧೀಶ ದೀಪಕ್ ಗುಪ್ತಾ ಹೇಳಿದ್ದಾರೆ.

Join Whatsapp