ಸಂಸದ ನಳಿನ್ ಕುಮಾರ್ ಕಟೀಲ್ ಆರೋಗ್ಯದಲ್ಲಿ ಏರುಪೇರು

Prasthutha|

10 ದಿನ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದು ಸಂಸದರಿಂದ ಟ್ವೀಟ್

- Advertisement -

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಆರೋಗ್ಯದಲ್ಲಿ ಏರುಪೇರಾಗಿದ್ದು 10 ದಿವಸಗಳ ಕಾಲ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ ಎಂದು ಸಂಸದರು ಟ್ವೀಟ್ ಮಾಡಿದ್ದಾರೆ.

ತನ್ನ ಅನಾರೋಗ್ಯದ ವಿಚಾರವನ್ನು ಸ್ವತ ಟ್ವಿಟರ್ ನಲ್ಲಿ ಹಂಚಿಕೊಂಡ ನಳಿನ್ , ಸಂಕಲ್ಪ ಯಾತ್ರೆಯ ರಾಜ್ಯ ಪ್ರವಾಸ ಸಹಿತ ಪಕ್ಷದ ವಿವಿಧ ಚಟುವಟಿಕೆಗಳು ಮುಖಂಡರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಚಿಕಿತ್ಸೆಯ ಕಾರಣ 10 ದಿನಗಳ ತನಕ ಯಾವುದೇ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ . ಆದಷ್ಟು ಶೀಘ್ರದಲ್ಲಿ ಮತ್ತೇ ಪಕ್ಷ, ಕ್ಷೇತ್ರದ ಸೇವೆಗೆ ಮರಳುತ್ತೇನೆ ಎಂದು ಹೇಳಿದರು.

- Advertisement -

ಸಂಸದ ನಳಿನ್ ಕುಮಾರ್ ಅವರು ಸುರತ್ಕಲ್ ಟೋಲ್ ತೆರವಿಗೆ ನೀಡಿದ ಗಡುವು ಇಂದು ಮುಕ್ತಾಯವಾಗುತ್ತಿದ್ದು, ಟೋಲ್ ವಿರೋಧಿ ಹೋರಾಟ ಸಮಿತಿ ಸಂಸದರು ಟೋಲ್ ತೆರವುಗೊಳಿಸದಿದ್ದರೆ ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದೆ. ಈ ಮಧ್ಯೆ ಸಂಸದರು ಅನಾರೋಗ್ಯದ ಟ್ವೀಟ್ ಹಂಚಿಕೊಂಡಿದ್ದು ‘ಇದು ವಾಡಿಕೆಯ ನಾಟಕ’ ಎಂದು ಹೋರಾಟ ಸಮಿತಿಯವರು ಟೀಕಿಸಿದ್ದಾರೆ.

Join Whatsapp