ನಮೀಬಿಯಾದಿಂದ ತಂದ ಚೀತಾಗಳಿಗೆ ಕ್ವಾರಂಟೈನ್ ನಿಂದ ಮುಕ್ತಿ: ‘ಗ್ರೇಟ್ ನ್ಯೂಸ್’ ಎಂದು ವೀಡಿಯೋ ಟ್ವೀಟ್ ಮಾಡಿದ ಮೋದಿ

Prasthutha|

ನವದೆಹಲಿ: ನಮೀಬಿಯಾದಿಂದ ತರಲಾದ ಎರಡು ಚೀತಾಗಳು, ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿದ್ದು, ಚೀತಾಗಳನ್ನು ಈಗ ಕುನೋ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ .ಚೀತಾ ಬಿಡುಗಡೆಯಾಗುವ ವೀಡಿಯೋ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ‘ಗ್ರೇಟ್ ನ್ಯೂಸ್’ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

ಸೆಪ್ಟೆಂಬರ್ ನಲ್ಲಿ ಮೋದಿ ಜನ್ಮದಿನದಂದು ಬಿಡುಗಡೆ ಮಾಡಿದ ಚೀತಾಗಳ ವೀಡಿಯೊವನ್ನು ಹಂಚಿಕೊಂಡ ಪ್ರಧಾನಿ ಮೋದಿ, ಗ್ರೇಟ್ ನ್ಯೂಸ್! ಕಡ್ಡಾಯ ಕ್ವಾರಂಟೈನ್ ನಂತರ, ಕುನೊ ಉದ್ಯಾನವನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಉಳಿದವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಎಲ್ಲಾ ಚೀತಾಗಳು ಆರೋಗ್ಯಕರವಾಗಿವೆ, ಸಕ್ರಿಯವಾಗಿವೆ ಮತ್ತು ಉತ್ತಮವಾಗಿ ಹೊಂದಿಕೊಳ್ಳುತ್ತವೆ ಎಂದು ತಿಳಿದು ಬಂದಿದ್ದು, ನನಗೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಪ್ಟೆಂಬರ್ ನಲ್ಲಿ ನಮೀಬಿಯಾದ ತರಲಾದ ಈ ಎರಡು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. 50 ದಿವಸಗಳ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ಚೀತಾಗಳನ್ನು ಈಗ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡಲಾಗಿದೆ.

Join Whatsapp