ಮಾಡೆಲ್ ಪೂನಂ ಪಾಂಡೆ ಸಾವು ನಿಜ, ಸಾವಿನ ಕಾರಣ ಸುಳ್ಳು!

Prasthutha|

ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಫೆಬ್ರವರಿ ತಡರಾತ್ರಿ ನಿಧನ ಹೊಂದಿದ್ದಾರೆ. ಗರ್ಭಕಂಠ ಕ್ಯಾನ್ಸರ್​ನಿಂದ ನಿಧನ ಹೊಂದಿದ್ದಾರೆ ಎಂದು ಅವರ ತಂಡ ಹೇಳಿಕೆ ನೀಡಿತ್ತು. ಈ ಸುದ್ದಿ ಹೊರಬೀಳುತ್ತಿದ್ದಂತೆ ಮೊದಲಿಗೆ ಇದನ್ನು ಫೇಕ್ ಎನ್ನಲಾಗಿತ್ತು. ಬಳಿಕ ಪೂನಂ ಪಾಂಡೆ ಪ್ರಚಾರಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅಥವಾ ಯಾವುದೋ ಸಿನಿಮಾ ಅಥವಾ ವೆಬ್ ಸರಣಿಯ ಪ್ರಚಾರಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರು. ಆದರೆ ಪೂನಂ ನಿಜಕ್ಕೂ ನಿಧನ ಹೊಂದಿರುವ ಸುದ್ದಿ ಹೊರಬಿದ್ದ ಬಳಿಕ, ಆಕೆಯ ಸಾವಿಗೆ ನೀಡಲಾದ ಕಾರಣ ಸುಳ್ಳು ಎಂಬ ಅನುಮಾನ ವ್ಯಕ್ತವಾಗಿದೆ.

- Advertisement -

ಮೂರು ದಿನದ ಹಿಂದಷ್ಟೆ ವಿಡಿಯೋ ಒಂದನ್ನು ಪೂನಂ ಪಾಂಡೆ ಹಂಚಿಕೊಂಡಿದ್ದರು. ವಿಡಿಯೋನಲ್ಲಿ ಖುಷಿಯಾಗಿ ಪೂನಂ ಪಾಂಡೆ ಓಡಾಡಿಕೊಂಡಿದ್ದರು. ಅನಾರೋಗ್ಯ ಇದ್ದ ವ್ಯಕ್ತಿ ಹೀಗೆ ಇರಲು ಸಾಧ್ಯವೇ ಇಲ್ಲ. ಅದರಲ್ಲಿಯೂ ಕ್ಯಾನ್ಸರ್ ರೀತಿಯ ಮಾರಕ ಕಾಯಿಲೆ ಇರುವವರು ಹೀಗೆ ಆರೋಗ್ಯವಾಗಿ ಓಡಾಡಲು ಹೇಗೆ ಸಾಧ್ಯ, ಪೂನಂರ ಮ್ಯಾನೇಜರ್ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಕೆಲ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೂನಂ ಪಾಂಡೆಯ ನಿಧನ ಮಾದಕ ವಸ್ತುವಿನ ಅತಿಯಾದ ಸೇವನೆಯಿಂದ ಆಗಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಗರ್ಭಕಂಠ ಕ್ಯಾನ್ಸರ್​ನಿಂದ ನಿಧನ ಹೊಂದಿದ್ದಾರೆ ಎಂದು ಅವರ ತಂಡದವರು ಈ ಮೊದಲು ತಿಳಿಸಿದ್ದು ಸುಳ್ಳೆಂದು ಹೇಳಲಾಗುತ್ತಿದೆ. ಪೂನಂ ಪಾಂಡೆ ನಿಧನದ ಕುರಿತು ತನಿಖೆ ಜಾರಿಯಲ್ಲಿದ್ದು, ಅನುಮಾನಗಳಿಗೆ ಶೀಘ್ರವೇ ಉತ್ತರ ಸಿಗಲಿದೆ.



Join Whatsapp