ಕೇಜ್ರಿವಾಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಯೋಗಿ ಆದಿತ್ಯನಾಥ್

Prasthutha|

ಉತ್ತರ ಪ್ರದೇಶ: ಜೈಲಿಗೆ ಹೋಗಿ ಬಂದ ಬಳಿಕ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ ಹೇಳಿದ್ದಾರೆ.

- Advertisement -

ಬಿಜೆಪಿ ಅಧಿಕಾರಕ್ಕೆ ಬಂದರೆ ಆದಿತ್ಯನಾಥ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲಾಗುತ್ತದೆ ಎಂಬ ಕೇಜ್ರಿವಾಲ್‌ ಹೇಳಿದ್ದರು. ಅದಕ್ಕೆ ಆದಿತ್ಯನಾಥ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ದೆಹಲಿ ಸಿಎಂ ಅವರ ಮಾನಸಿಕ ಸಮತೋಲನ ತಪ್ಪಿದೆ. ಅಣ್ಣಾ ಹಜಾರೆ ಇಟ್ಟಿದ್ದ ಭರವಸೆಯನ್ನು ಅವರು ಯಾವತ್ತೋ ಛಿದ್ರಗೊಳಿಸಿದ್ದಾರೆ. ಭ್ರಷ್ಟರ ಪರ ನಿಂತಿರುವ ಅವರು ಇದೀಗ ನನ್ನನ್ನು ಗುರಿಯಾಗಿಸುತ್ತಿದ್ದಾರೆ. ಮಾತ್ರವಲ್ಲ, ಅಣ್ಣಾ ಹಜಾರೆ ವಿರೋಧಿಸಿದ್ದ ಕಾಂಗ್ರೆಸ್‌ ಜತೆ ಕೈಜೋಡಿಸಿದ್ದಾರೆ ಎಂದು ಆದಿತ್ಯನಾಥ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Join Whatsapp